Bengaluru

ಕನ್ನಡ ಸಂಘಗಳು ಬಂದ್‌ ಕೈ ಬಿಡಬೇಕು – ಅಶ್ವತ್ಥ್ ನಾರಾಯಣ

ಬೆಂಗಳೂರು : ಎಂ.ಈ.ಎಸ್‌ ವಿರುದ್ಧ ಭುಗಿಲೆದ್ದಿರುವ ಕನ್ನಡ ಸಂಘಗಳು ಡಿಸೆಂಬರ್‌ ೩೧ಕ್ಕೆ ಕರ್ನಾಟಕವನ್ನು ಬಂದ್‌ ಮಾಡಲು ಕರೆ ನೀಡಿವೆ. ಕೆಲವು ಸಂಘ ಸಂಸ್ಥೆಗಳು ಇದಕ್ಕೆ ಬೆಂಬಲವನ್ನು ಸೂಚಿಸಿದೆ. ಆದರೆ ಈ ಬಂದ್‌ ಅನ್ನು ಕೈ ಬಿಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ್‌ ಕೇಳಿಕೊಂಡಿದ್ದಾರೆ.

ಜನ ಸಂಕಷ್ಟದಲ್ಲಿದ್ದಾರೆ. ಬಂದ್ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುವುದು ಬೇಡ. ಕನ್ನಡ ಸಂಘಟನೆಗಳು ಬಂದ್ ಕರೆಯನ್ನು ಕೈಬಿಡಬೇಕು. ಸರ್ಕಾರ ನಿಮ್ಮ ಜೊತೆಗಿದೆ. ಹೀಗಿರುವಾಗ ಬಂದ್ ಕೈಬಿಟ್ಟು ಸಹಕರಿಸಬೇಕು ಎಂದು ಅಶ್ವತ್ಥ್‌ ನಾರಾಯಣ್‌ ಮಾಧ್ಯಮದ ಮುಖಾಂತರ ಕನ್ನಡ ಸಂಘಗಳನ್ನು ಮನವಿ ಮಾಡಿಕೊಂಡಿದ್ದಾರೆ.

ನೆಲ ಜಲ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದ ಹಿತ ಕಾಯೋದು ನಾವು ಬದ್ಧರಾಗಿದ್ದೇವೆ. ಧ್ವಜ ಸುಡುವವರ ವಿರುದ್ಧ, ಗಡಿ ತಂಟೆಗೆ ಬರುವವರ ವಿರುದ್ಧ ಗೂಂಡಾ ಕಾಯ್ದೆಯಡಿ, ನಾಡದ್ರೋಹದ ಕೇಸ್ ಹಾಕುತ್ತೇವೆ. ಯಾರೇ ಕಿಡಿಗೇಡಿಗಳು ಸಣ್ಣ ಕೃತ್ಯ ಮಾಡಿದರೂ ಅವರನ್ನು ಬಗ್ಗು ಬಡಿಯುತ್ತೇವೆ. ಕನ್ನಡಪರ ಸಂಘಟನೆ ಬಂದ್ ಉಚಿತವೂ ಅಲ್ಲ, ಸೂಕ್ತವೂ ಅಲ್ಲ ಎಂದು ಅಶ್ವತ್ಥ್‌ ನಾರಾಯಣ್‌ ಹೇಳಿದ್ದಾರೆ.

Share Post