National

ಹಿಮಪಾತದಿಂದಾಗಿ ಉರುಳಿಬಿದ್ದ ಬಸ್‌; ಇಬ್ಬರ ಸ್ಥಿತಿ ಗಂಭೀರ

ಪೂಂಚ್; ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮಂಡಿ ಪ್ರದೇಶದಲ್ಲಿ ಬುಧವಾರ ಮಿನಿ ಬಸ್ ಪಲ್ಟಿಯಾಗಿದ್ದು, ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಿಗ್ಗೆ ಮಂಡಿಯ ಸ್ವಾಜಿಯಾನ್ ಪ್ರದೇಶದಲ್ಲಿ ಹೆಚ್ಚು ಹಿಮಪಾತವಾಗಿತ್ತು. ರಸ್ತೆಗಳಲ್ಲೆಲ್ಲಾ ಹಿಮ ಶೇಖರಣೆಯಾಗಿತ್ತು. ಹೀಗಾಗಿ ಮಿನಿ ಬಸ್‌ ಸ್ಕಿಡ್‌ ಆಗಿ ಉರುಳಿಬಿದ್ದಿದೆ. ಅಪಘಾತಕ್ಕೀಡಾದ ಮಿನಿ ಬಸ್‌ ನಂಬರ್‌ ಜೆಕೆ 12-1419 ಎಂದು ಗೊತ್ತಾಗಿದೆ.

ಚಳಿಗಾಲವಾದ್ದರಿಂದ ಜುಮ್ಮ-ಕಾಶ್ಮೀರದಲ್ಲಿ ಹಿಮಪಾತಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ಹೈವೇ ರಸ್ತೆಗಳಲ್ಲಿ ಅಡಿಗಟ್ಟಲೆ ಹಿಮ ಶೇಖರಣೆಯಾಗುತ್ತಿದೆ. ಅಧಿಕಾರಿಗಳು ದಿನವೂ ಹಿಮ ತೆರವುಗೊಳಿಸುತ್ತಿದ್ದಾರೆ. ಆದರೂ ಇಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಹಿಮ ತೆರವು ಮಾಡದೇ ಇದ್ದದ್ದೇ ಈ ಘಟನೆ ಕಾರಣ ಎಂದು ಇದೇ ವೇಳೆ ಸ್ಥಳೀಯರು ಆರೋಪಿಸಿದ್ದಾರೆ.

Share Post