National

ಪಂಜಾಬ್‌ ಭಗವಂತ ಮಾನ್‌ ಸಂಪುಟ ಸೇರಿದ ಹತ್ತು ಸಚಿವರು

ಚಂಡೀಗಡ: ಮೊನ್ನೆಯಷ್ಟೇ ಪಂಜಾಬ್‌ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಭಗವಂತ ಮಾನ್‌ ಅವರ ಸಂಪುಟಕ್ಕೆ ೧೦ ಮಂದಿ ಸೇರ್ಪಡೆಯಾಗಿದ್ದಾರೆ. ಭಗವಂತ ಮಾನ್ ನೇತೃತ್ವದ ಪಂಜಾಬ್ ನೂತನ ಸರ್ಕಾರದ ಸಚಿವರಾಗಿ 10 ಮಂದಿ ಎಎಪಿ ಶಾಸಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಚಂಡೀಗಡದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರ ಪೈಕಿ 8 ಮಂದಿ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನೂತನ ಸಚಿವರ ಪೈಕಿ ಐವರು ಮಾಲ್ವಾ ಪ್ರದೇಶವನ್ನು ಪ್ರತಿನಿಧಿಸುವವರಾದರೆ, ನಾಲ್ವರು ಮಾಝಾ ಹಾಗೂ ಒಬ್ಬರು ದೊವಾಬಾ ಪ್ರದೇಶದವರು.
ಇನ್ನು ಮಧ್ಯಾಹ್ನದ ಮೇಲೆ ಮುಖ್ಯಮಂತ್ರಿ ಭಗವಂತ ಮಾನ್ ಅವರು ಸಚಿವ ಸಂಪುಟ ಸಭೆ ನಡೆಸುವ ನಿರೀಕ್ಷೆ ಇದೆ. ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಭಗವಂತ ಮಾನ್ ಅವರು ಇದೇ 16ರಂದು ಭಗತ್ ಸಿಂಗ್ ಗ್ರಾಮವಾದ ಖಟಕಡಕಲಾನ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

Share Post