National

ವೈರಲ್ ಆಗುತ್ತಿರುವ ಶ್ರೀರಾಮನ ಫೋಟೋ ನಿಜವಾದುದಲ್ಲ; ದೇಗುಲ ಟ್ರಸ್ಟ್ ಸ್ಪಷ್ಟನೆ

ಅಯೋಧ್ಯೆ; ಅಯೋಧ್ಯೆಯ ಗರ್ಭಗುಡಿಯಲ್ಲಿ ಇಟ್ಟಿರುವ ಬಾಲರಾಮನ ವಿಗ್ರಹದ ಚಿತ್ರ ಬಿಡುಗಡೆ ಮಾಡಿಲ್ಲ. ವೈರಲ್ ಆಗುತ್ತಿರುವ ಫೋಟೋ ನಿಜವಾದುದಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ಪಷ್ಟನೆ ಕೊಟ್ಟಿದ್ದಾರೆ.

 

  ನಿನ್ನೆಯಿಂದ ಒಂದು ಮೂರ್ತಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದೇ ನಿಜವಾದ ಮೂರ್ತಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಗುಲದ ಟ್ರಸ್ಟ್ ಸ್ಪಷ್ಟನೆ ಕೊಟ್ಟಿದೆ.

 

ಪ್ರಾಣ ಪ್ರತಿಷ್ಠೆ ಪೂರ್ಣವಾಗುವುದಕ್ಕೂ ಮುಂಚೆ,  ಬಟ್ಟೆಯಿಂದ ಮುಚ್ಚಿರುವ ಬಾಲ ರಾಮ ಮೂರ್ತಿಯ ಕಣ್ಣುಗಳನ್ನು ತೆಗೆಯುವುದಿಲ್ಲ. ಶ್ರೀರಾಮನ ಕಣ್ಣುಗಳು ಕಾಣುವ, ವೈರಲ್ ಆಗಿರುವ ವಿಗ್ರಹವು ನಿಜವಾದುಲ್ಲ. ಮೂರ್ತಿಯ ಕಣ್ಣುಗಳು ಕಾಣುವಂಥ ಫೋಟೊ ಬಹಿರಂಗವಾಗಿದ್ದು ನಿಜವಾದರೆ ಈ ಬಗ್ಗೆ ತನಿಖೆಯಾಗಬೇಕು. ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದನ್ನು ಪತ್ತೆಮಾಡಬೇಕು ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.

 

Share Post