CinemaCrimeNational

ನಟಿ ವಿಜಯಲಕ್ಷ್ಮಿಗೆ ಏಳು ಬಾರಿ ಗರ್ಭಪಾತ ಮಾಡಿಸಿದ್ದನಂತೆ ಆ ರಾಜಕಾರಣಿ..!

ಚೆನ್ನೈ; ನಟಿ ವಿಜಯಲಕ್ಷ್ಮೀ ಹಲವು ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಕೆಲ ತಿಂಗಳುಗಳ ಹಿಂದೆ ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಇರುತ್ತಿದ್ದ ವಿಜಯಲಕ್ಷ್ಮಿ ಹಲವರ ವಿರುದ್ಧ ಆರೋಪ ಮಾಡುತ್ತಿದ್ದರು. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಟಿ ವಿಜಯಲಕ್ಷ್ಮೀ ಹೆಚ್ಚು ಸುದ್ದಿಯಲ್ಲಿದ್ದರು. ಅನಂತರ, ಕೆಲ ತಿಂಗಳಿಂದ ಅವರ ಸುದ್ದಿಯೇ ಇರಲಿಲ್ಲ. ಇದೀಗ ವಿಜಯಲಕ್ಷ್ಮಿಯವರು ತಮಿಳುನಾಡಿನ ರಾಜಕಾರಣಿಯೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿ, ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚೆನ್ನೈ ಪೊಲೀಸ್‌ ಆಯುಕ್ತರ ನೆರವಿನೊಂದಿಗೆ ಪೊಲೀಸ್‌ ಠಾಣೆಯಲ್ಲಿ ದೂರನ್ನು ಕೂಡಾ ದಾಖಲಿಸಿದ್ದಾರೆ.

ತಮಿಳುನಾಡಿನ ರಾಜಕಾರಣಿ ಸೀಮನ್‌ ಎಂಬುವವರ ವಿರುದ್ಧ ನಟಿ ವಿಜಯಲಕ್ಷ್ಮೀ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ. ಸೀಮನ್‌ ಜೊತೆ ನಾನು ಮದುವೆಯಾಗಿದ್ದೇನೆ. ಆದ್ರೆ ಅವರು ನನಗೆ ಮೋಸ ಮಾಡುತ್ತಲೇ ಹೋಗಿದ್ದಾರೆ ಎಂದು ಆರೋಪಿದ್ದಾರೆ. ಈ ಬಗ್ಗೆ ವಿಜಯಲಕ್ಷ್ಮಿಯವರು ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ದಾಖಲಿಸಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ಸೀಮನ್‌ ಅವರಿಗೆ ನೋಟಿಸ್‌ ಕೂಡಾ ಜಾರಿ ಮಾಡಲಾಗಿದೆ.

Share Post