ಕಾನೂನುಬದ್ಧವಾಗಿ ಮದುವೆಯಾಗದಿದ್ದರೆ ಎರಡನೇ ಪತ್ನಿಗೆ ಮೃತ ಗಂಡನ ಪಿಂಚಣಿ ಸೌಲಭ್ಯಕ್ಕೆ ಅನರ್ಹಳು-ಬಾಂಬೆ ಹೈಕೋರ್ಟ್
ಮುಂಬೈ: ತನ್ನ ಪತಿ ನಿಧನರಾದ ಮೇಲೆ ವಿಧವಾ ಪಿಂಚಣಿ ಮೊರೆ ಹೋಗಿದ್ದ ಮಹಿಳೆಗೆ ಬಾಂಬೆ ಹೈಕೋರ್ಟ್ ಆಘಾತಕಾರಿ ತೀರ್ಪನ್ನು ನೀಡದೆ. ಮೊದಲನೇ ಮದುವೆಯನ್ನು ಕಾನೂನು ಬದ್ಧವಾಗಿ ರದ್ದಗೊಳಿಸದೆ ಎರಡನೇ ಮದುವೆ ಮಾಡಿಕೊಂಡ ಪತ್ನಿಗೆ ತನ್ನ ಪತಿ ನಿಧನದ ನಂತರ ಸಿಗುವ ಪಿಂಚಣೆ ಸಿಗಲ್ಲ ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಎಸ್.ಜೆ.ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಪಿಂಚಣಿ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೊಲ್ಲಾಪುರದ ಶಾಮಲ್ ಟೇಟ್ ಅರ್ಜಿ ಸಲ್ಲಿಸಿದ್ದರು.
ಸೋಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ಯೂನ್ ಮಹಾದೇವ್ ಅವರ ಎರಡನೇ ಪತ್ನಿ ಟೇಟ್ 1996ರಲ್ಲಿ ಮಹದೇವು ನಿಧನರಾಗಿದ್ದಾರೆ. ನಿಧನರಾದ ಬಳಿಕ ಅವರ ನಿವೃತ್ತಿ ಪ್ರಯೋಜನಗಳು ಮೊದಲ ಪತ್ನಿಗೆ ಮತ್ತು ಪಿಂಚಣಿ ಸೌಲಭ್ಯ ಎರಡನೇ ಪತ್ನಿ ಪಡೆಯಬಹುದು ಎಂದು ಒಪ್ಪಂದ ಆಗಿದೆ.
ಕೆಲವು ವರ್ಷಗಳ ನಂತರ ಮಹದೇವ್ ಪತ್ನಿಯೂ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ. ಎರಡನೇ ಪತ್ನಿ ವಿಧವಾ ಪಿಂಚಣಿಯನ್ನು ತನಗೆ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ಪರಿಶೀಲನೆ ನಡೆಸಿ ಸರ್ಕಾರ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ ನಾಲ್ಕು ಬಾರಿ ಒಂದೇ ಉತ್ತರವನ್ನು ಕಳುಹಿಸಿದೆ. 2007 ರಿಂದ 2014 ರವರೆಗೆ ಪ್ರಯತ್ನಿಸಿದರೂ ಫಲ ಸಿಗದ ಕಾರಣ. 2019 ರಲ್ಲಿ ಬಾಂಬೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ರು.
ಮಹಾದೇವನ ಮೂವರು ಮಕ್ಕಳಿಗೆ ತಾಯಿ ನಾನು. ಸಮಾಜದಲ್ಲಿ ಮಹಾದೇವ ಅವರ ಪತ್ನಿ ಎಂದು ಗುರುತಿಸಿಕೊಂಡಿರುವ ನಾನು ಪಿಂಚಣಿಗೆ ಅರ್ಹಳಾಗಿದ್ದೇನೆ. ವರ್ಷಗಟ್ಟಲೇ ಪಿಂಚಣಿ ಪಡೆಯುತ್ತಿದ್ದ ಮೊದಲ ಪತ್ನಿಯೂ ಮೃತಪಟ್ಟಿದ್ದಾಳೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಬಾಂಬೆ ಹೈಕೋರ್ಟ್ ಕಾನೂನುಬದ್ಧವಾಗಿ ಮದುವೆಯಾಗದಿದ್ದರೆ ಸರ್ಕಾರದಿಂದ ಸಿಗುವ ಯಾವುದೇ ಹಕ್ಕುಗಳು ಸಿಗುವುದಿಲ್ಲ ಎಂದು ತೀರ್ಪು ನೀಡಿದೆ.