Lifestyle

ತಿಗಣೆ ಕಾಟದಿಂದ ಬೇಸತ್ತಿದ್ದೀರಾ? ಹೀಗೆ ಮಾಡಿ

ಮನೆಯಲ್ಲಿ ತಿಗಣೆ  ತುಂಬಾ ತುಂಬಿಕೊಂಡರೆ ಕಷ್ಟವಾಗುತ್ತದೆ. ತಿಗಣೆಗಳು ಸಾಮಾನ್ಯವಾಗಿ ರಾತ್ರಿಯಿಡೀ ಸಕ್ರಿಯವಾಗಿರುತ್ತವೆ, ನೀವು ನಿದ್ದೆ ಮಾಡುವಾಗ ರಕ್ತವನ್ನು ಹೀರುತ್ತದೆ. 3 ನಿಮಿಷದಿಂದ 10 ನಿಮಿಷಗಳವರೆಗೆ ನಮ್ಮ ರಕ್ತವನ್ನು ಹೀರುತ್ತದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಆರಂಭದಲ್ಲಿ ಅದು ಕಚ್ಚಿದಾಗ ನೋವಾಗುವುದಿಲ್ಲ, ಆದರೆ ನಂತರ ತುರಿಕೆ ಮತ್ತು ಕಿರಿಕಿರಿಯುಂಟುಮಾಡುತ್ತದೆ.ಈ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ಕೆಲ ಮನೆಮದ್ದುಗಳಿದೆ.ತಿಗಣೆಯನ್ನು ಹೋಗಲಾಡಿಸುವ ಕೆಲಸ ಆರಂಭ ಮಾಡುವ ಮುನ್ನ ನಿಮ್ಮ ಕೊಠಡಿಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ. ಮನೆ ಸ್ವಚ್ಛವಾಗಿದ್ದರೆ ತಿಗಣೆಗಳು ಉಳಿಯುವುದಿಲ್ಲ. ನಿಮ್ಮ ಬಟ್ಟೆಗಳ ಮೇಲೆ ಸೋಂಕು ಇದೆಯೇ ಎಂದು ನೋಡಿ, ಇದ್ದರೆ ಬಟ್ಟೆಗಳನ್ನು ತೊಳೆಯಿರಿ.
ವಿನೆಗರ್:
ಅಡುಗೆಮನೆಯಲ್ಲಿ ಇದರ ಬಳಕೆಯನ್ನು ಹೊರತುಪಡಿಸಿ, ತಿಗಣೆ ನಿವಾರಣೆಗೆ ಇದು ಹೆಚ್ಚು ಸಹಕಾರಿ. ವಿನೆಗರ್ ಮೂಲಕ ತಿಗಣೆಗಳನ್ನು ಕೊಲ್ಲಬಹುದಾದರೂ, ಅದು ಅವುಗಳ ಮೊಟ್ಟೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ನಿಮ್ಮ ಮನೆಯಲ್ಲಿ ತಿಗಣೆ ಇರುವ ಮೂಲೆಗಳನ್ನು ಗುರುತು ಮಾಡಿಕೊಳ್ಳಿ, ಆ ಅಂಚುಗಳ ಮೇಲೆ ಬಿಳಿ ವಿನೆಗರ್ ಅನ್ನು ಹಾಕಿ. ಅಥವಾ ಸ್ಪ್ರೇ ಬಾಟಲ್ ಬಳಕೆ ಮಾಡಿ ಸಿಂಪಡಿಸಿ.
ಅಡಿಗೆ ಸೋಡಾ:
ತಿಗಣೆಗಳಿಗೆ ಉತ್ತಮವಾದ ಮನೆಮದ್ದುಗಳಲ್ಲಿ ಒಂದು ಎಂದರೆ ಅಡಿಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬನೇಟ್. ತಿಗಣೆ ಇರುವ ಪ್ರದೇಶದಲ್ಲಿ ಅಡಿಗೆ ಸೋಡಾವನ್ನು ಸಿಂಪಡಿಸುವ ಮೂಲಕ ನೀವು ತಿಗಣೆಯಿಂದ ಮುಕ್ತಿ ಪಡೆಯಬಹುದು. ಬೇಕಿಂಗ್ ಸೋಡಾ ತಿಗಣೆಗಳ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಅವುಗಳನ್ನು ತಕ್ಷಣವೇ ಕೊಲ್ಲುತ್ತದೆ. ಆದರೆ ಇದು ಫಲಿತಾಂಶ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
ಕರ್ಪೂರ:
ಕರ್ಪೂರವನ್ನು ದಿನದಲ್ಲಿ ಮೂರು ಬಾರಿ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚುವುದರಿಂದ, ತಿಗಣೆ, ಸೊಳ್ಳೆ ಮತ್ತು ನೊಣಗಳನ್ನು ದೂರ ಮಾಡಬಹುದು.

Share Post