ದೇಶದಲ್ಲಿ ಮದುವೆ ಸೀಸನ್; 38 ಲಕ್ಷ ಮದುವೆ, 4.74 ಲಕ್ಷ ಕೋಟಿ ರೂ. ಖರ್ಚು ಅಂದಾಜು!
ಬೆಂಗಳೂರು; ದೇಶದಲ್ಲಿ ಈಗ ವೆಡ್ಡಿಂಗ್ ಸೀಸನ್. ಎಲ್ಲೆಡೆ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ಅಂದಹಾಗೆ ಒಂದು ಅಂದಾಜಿನ ಪ್ರಕಾರ ಈ ಮದುವೆ ಸೀಸನ್‌ನಲ್ಲಿ ದೇಶಾದ್ಯಂತ ಒಟ್ಟು 38 ಲಕ್ಷ ಮದುವೆಗಳು ನಡೆಯಲಿವೆಯಂತೆ. ಇದಕ್ಕಾಗಿ 4.74 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬಹುದು ಎಂದು ಹೇಳಲಾಗಿದೆ. ನ್ಯಾಷನಲ್ ಫೆಡರೇಶನ್ ಆಫ್ ಟ್ರೇಡರ್ಸ್ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಮಾಹಿತಿ ಪ್ರಕಾರ ಯಾರ್ಯಾರು ಎಷ್ಟು ಖರ್ಚು ಮಾಡಬಹುದು..?
=====================================
- 50 ಸಾವಿರಕ್ಕೂ ಹೆಚ್ಚು ಮದುವೆಗಳಿಗೆ ತಲಾ 1 ಕೋಟಿ ರೂಪಾಯಿಗೂ ಹೆಚ್ಚು ಖರ್ಚು
- 50 ಸಾವಿರಕ್ಕೂ ಹೆಚ್ಚು ಮದುವೆಗಳಿಗೆ ತಲಾ 50 ಲಕ್ಷ ರೂಪಾಯಿ ಖರ್ಚು
- 7 ಲಕ್ಷಕ್ಕೂ ಅಧಿಕ ಮದುವೆಗಳಿಗೆ ತಲಾ 3 ಲಕ್ಷ ರೂ.ಗೂ ಅಧಿಕ ಖರ್ಚು
- ದೆಹಲಿಯೊಂದರಲ್ಲೇ 4 ಲಕ್ಷ ಮದುವೆಗಳು, ಇದಕ್ಕೆ 1.25 ಲಕ್ಷ ಕೋಟಿ ರೂ. ಖರ್ಚು
- ಒಟ್ಟು 38 ಲಕ್ಷ ಮದುವೆಗಳು, 4.74 ಲಕ್ಷ ಕೋಟಿ ರೂ. ಖರ್ಚಾಗುವುದಾಗಿ ಅಂದಾಜಿಸಲಾಗಿದೆ