Lifestyle

ಮಲಗುವ ಕೋಣೆಯಲ್ಲಿ ನಿಂಬೆ ಹಣ್ಣು ಇರಿಸಿ, ನೆಮ್ಮದಿ ವಾತಾವರಣ ಸೃಷ್ಟಿ ಮಾಡಿಕೊಳ್ಳಿ

ನಿಂಬೆಹಣ್ಣು… ಉತ್ತಮ ಪರಿಮಳ ಮತ್ತು ರುಚಿಯನ್ನು ಹೊಂದಿರುವ ಸಿಟ್ರಸ್ ಹಣ್ಣು. ನಿಂಬೆ ಹಣ್ಣನ್ನು ಆಹಾರ ಮತ್ತು ಪಾನೀಯ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನಿಂಬೆಹಣ್ಣಿಲ್ಲದ ಅಡುಗೆ ಮನೆ ಸಾಮಾನ್ಯವಾಗಿ ಇರುವುದಿಲ್ಲ. ಇದು ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ವಿಟಮಿನ್ ಬಿ, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಮೃದ್ಧವಾಗಿ ಒಳಗೊಂಡಿರುತ್ತದೆ.

ಇಂತಹ ಹಲವಾರು ಪೋಷಕಾಂಶಗಳನ್ನು ಹೊಂದಿರುವ ನಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನಿಂಬೆಹಣ್ಣು ತಿನ್ನುವುದರ ಜೊತೆಗೆ ಮನೆಯಲ್ಲಿ ಇಟ್ಟುಕೊಳ್ಳುವುದು ಇನ್ನೂ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಮನೆಯಲ್ಲಿ ಕ್ರಿಮಿ ಕೀಟಗಳ ಹತೋಟಿಗೆ ತರಲು ನಿಂಬೆ ರಸವನ್ನು ಚಿಕ್ಕ ಪಾತ್ರೆಯಲ್ಲಿ ತೆಗೆದುಕೊಂಡು   ಕೀಟಗಳಿರುವ ಜಾಗದಲ್ಲಿಟ್ಟರೆ ಕೀಟಗಳು ಆ ಜಾಗವನ್ನು ಬಿಟ್ಟು ಹೋಗುತ್ತವೆ.

ವಿಶೇಷವಾಗಿ ಮಲಗುವ ಮೊದಲು ನಿಂಬೆ ಚೂರುಗಳನ್ನು ಹಾಕಿದರೆ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ರೂಂ ಫ್ರೆಶರ್‌ ಕೂಡ ಅಗತ್ಯವಿರುವುದಿಲ್ಲ. ನಿಂಬೆ ರಸದ ಸುವಾಸನೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕೋಣೆಯಲ್ಲಿ ನಿಮ್ಮನ್ನು ಇಟ್ಟುಕೊಳ್ಳುವುದರಿಂದ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಮಲಗುವ ಕೋಣೆಯಲ್ಲಿ ನಿಂಬೆ ಹೋಳುಗಳನ್ನು ಹಾಕುವುದರಿಂದ ಉಸಿರಾಟದ ಸಮಸ್ಯೆ ಹಾಗೂ ಮೂಗು ಕಟ್ಟಿಕೊಳ್ಳುವುದನ್ನು ತಡೆಯಬಹುದು.  ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ನಿಂಬೆ ಹೋಳುಗಳಿಂದ ಬರುವ ಪರಿಮಳ ಮನಸ್ಸನ್ನು ಶಾಂತಗೊಳಿಸುವ ಜೊತೆಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಂಬೆಯ ವಾಸನೆಯು ಆತಂಕವನ್ನು ದೂರ ಮಾಡುತ್ತದೆ. ಇದು ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕ ಆಲೋಚನೆಗಳು ಬರುವಂತೆ ಮಾಡುತ್ತದೆ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಮನೆಯಲ್ಲಿರುವ ನೊಣ, ಸೊಳ್ಳೆ ಹಾಗೂ ಇತರೆ ಕೀಟಗಳನ್ನು ಹಿಮ್ಮೆಟ್ಟಿಸುವ ಶಕ್ತಿ ನಿಂಬೆ ರಸಕ್ಕಿದೆ. ಅದಕ್ಕಾಗಿಯೇ ಮಲಗುವ ಕೋಣೆಯಲ್ಲಿ ನಿಂಬೆ ಹೋಳುಗಳನ್ನು ಇಡುವುದರಿಂದ ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡುತ್ತದೆ ಮತ್ತು ಅವು ನಿದ್ರೆಗೆ ಭಂಗ ತರುವುದನ್ನು ತಡೆಯುತ್ತದೆ. ಮಲಗುವ ಕೋಣೆಯಲ್ಲಿ ನಿಂಬೆ ಹೋಳುಗಳನ್ನು ಹಾಕುವುದರಿಂದ ಶ್ವಾಸಕೋಶದ ಕಾರ್ಯವನ್ನು ಚೆನ್ನಾಗಿರುತ್ತದೆ.

Share Post