HealthLifestyle

ತಿಂದ ಕೂಡಲೇ ಎದೆ ಉರಿ ಬರುತ್ತಿದೆಯಾ..?; ಹಾಗಾದ್ರೆ ಇಲ್ಲಿದೆ ಪರಿಹಾರ!

ತುಂಬಾ ಜನ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಅದರಲ್ಲೂ ಕೂಡಾ ಕೆಲವರಿಗೆ ತಿಂದ ತಕ್ಷಣ ಎದೆ ಉರಿ ಶುರುವಾಗುತ್ತದೆ.. ಎದೆ ಭಾಗದಲ್ಲಿ ಬೆಂಕಿ ಹಾಕಿದ ಅನುಭವ ಆಗುತ್ತಿರುತ್ತದೆ.. ಇದರಿಂದಾಗಿ ಜನ ಒದ್ದಾಡುತ್ತಿರುತ್ತಾರೆ.. ಇದಕ್ಕೆ ಮುಖ್ಯ ಕಾರಣವೇ ಅಸಿಡಿಟಿ. ಇದು ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ಗ್ರಂಥಿಯಿಂದ ಅತಿಯಾದ ಆಮ್ಲ ಸ್ರವಿಸುವಿಕೆಯಿಂದ ಉಂಟಾಗುತ್ತದೆ.. ಇದರಿಂದಾಗಿ ಬಹುತೇಕ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ..

ಆಮ್ಲೀಯತೆಯಿಂದಾಗಿ ಹೊಟ್ಟೆಯ ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಕಾರಣಗಳು, ದೀರ್ಘಕಾಲ ಊಟ ಮಾಡದೇ ಹಸಿದಿರುವುದು, ಚಹಾ, ಕಾಫಿ, ಎಣ್ಣೆ, ಮಸಾಲೆಯುಕ್ತ ಆಹಾರ, ಧೂಮಪಾನ, ಮದ್ಯಪಾನ ಹೆಚ್ಚಾಗಿ ಮಾಡುವುದೇ ಆಗಿದೆ. ಇದರಿಂದಾಗಿ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ನೋಡೋಣ ಬನ್ನಿ..

ಅಸಿಡಿಟಿಗೆ ಶುಂಠಿ ಒಳ್ಳೆಯ ಮನೆಯ ಔಷಧಿ.. ಅಲ್ಪ ಪ್ರಮಾಣದ ಶುಂಠಿ ರಸ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿನ ಉರಿಯೂತವನ್ನು ನಿವಾರಿಸುತ್ತದೆ. ನೀವು ಶುಂಠಿ ಚಹಾವನ್ನು ದಿನಾ ಬೆಳಗ್ಗೆ ಕುಡಿಯವುದು ಒಳ್ಳೆಯದು..

ಇನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲ ಕಡಿಮೆಯಾಗುತ್ತದೆ. ಇದರ ಜೊತೆಗೆ ಸೋಂಪು ಸೇವನೆ ಕೂಡಾ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.. ಊಟ ಮಾಡಿದ ನಂತರ ಸೋಂಪು ಅಗಿಯಿರಿ. ಅಥವಾ ನೀರಿನಲ್ಲಿ ಕುದಿಸಿ ಕುಡಿಯಿರಿ. ಇಲ್ಲದೆ ಹೋದರೆ ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯಿರಿ. ಸೋಂಪು ಕಾಳುಗಳ ಬದಲಿಗೆ ಜೀರಿಗೆಯನ್ನು ಸಹ ಬಳಸಬಹುದು.

ತಣ್ಣನೆಯ ಹಾಲನ್ನು ಸೇವಿಸುವುದರಿಂದ ಹೊಟ್ಟೆಯ ತೊಂದರೆಯೂ ಕಡಿಮೆಯಾಗುತ್ತದೆ. ಸಕ್ಕರೆ ಸೇರಿಸದೆಯೇ ಒಂದು ಲೋಟ ತಣ್ಣನೆಯ ಹಾಲನ್ನು ಕುಡಿಯಿರಿ. ರಾತ್ರಿ ಮಲಗುವ ಮುನ್ನ ಕುಡಿದರೆ ಫಲಿತಾಂಶ ಸಿಗುತ್ತದೆ. ಮಜ್ಜಿಗೆ ಹೊಟ್ಟೆಯನ್ನು ತಂಪಾಗಿಸುತ್ತದೆ. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಪುಡಿ ಬೆರೆಸಿ ಕುಡಿಯಿರಿ. ಇದು ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.

ಕೆಲವು ತುಳಸಿ ಎಲೆಗಳನ್ನು ಜಗಿಯುವುದರಿಂದ ಎದೆಯುರಿ ನಿವಾರಣೆಯಾಗುತ್ತದೆ. ಇದನ್ನು ನೀರಿನಲ್ಲಿ ಕುದಿಸಬಹುದು. ಅಥವಾ ನೀವು ಅದನ್ನು ಚಹಾದಂತೆ ಕುಡಿಯಬಹುದು.

Share Post