CrimePolitics

ಪೋಕ್ಸೋ ಪ್ರಕರಣ; ಯಡಿಯೂರಪ್ಪ ಬಂಧನ ಕೋರಿ ಕೋರ್ಟ್‌ಗೆ ರಿಟ್‌ ಅರ್ಜಿ

ಬೆಂಗಳೂರು; ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.. ಲೋಕಸಭಾ ಚುನಾವಣೆಗೂ ಮೊದಲು ಮಹಿಳೆಯೊಬ್ಬರು ತನ್ನ ಮಗಳಿಗೆ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕೇಸ್‌ ದಾಖಲಿಸಿದ್ದರು.. ಆದ್ರೆ ಕೇಸ್‌ ದಾಖಲಾಗಿ ಹಲವು ತಿಂಗಳಾದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿ ಈಗ ಸಂತ್ರಸ್ತೆಯ ಸಹೋದರ ಕೋರ್ಟ್‌ ಮೊರೆ ಹೋಗಿದ್ದಾರೆ..

ಪ್ರಕರಣ ಸಂಬಂಧ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.. ಆದ್ರೆ ಹಲವು ತಿಂಗಳಾದರೂ ಯಡಿಯೂರಪ್ಪ ಅವರನ್ನು ವಿಚಾರಣೆ ಮಾಡಿಲ್ಲ. ಯಾವುದೇ ಕ್ರಮ ಕೂಡಾ ಆಗಿಲ್ಲ.. ಯಡಿಯೂರಪ್ಪ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಯನ್ನು ಕೂಡಾ ಸೀಜ್‌  ಮಾಡಿಲ್ಲ.. ಹೀಗಾಗಿ ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ಗೆ ಸಂತ್ರಸ್ತೆಯ ಸಹೋದರ ರಿಟ್‌ ಅರ್ಜಿ ಹಾಕಿದ್ದಾರೆ..

ಇತ್ತೀಚೆಗೆ ಸಂತ್ರಸ್ತೆಯ ತಾಯಿ ನಿಧನರಾಗಿದ್ದಾರೆ.. ಇದರಿಂದಾಗಿ ಸಂತ್ರಸ್ತೆ ಅನಾಥೆಯಾಗಿದ್ದಾಳೆ.. ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ.. ಕನಿಷ್ಠ 41ಎ ಅಡಿ ನೋಟಿಸ್ ನೀಡಿ ಯಡಿಯೂರಪ್ಪರನ್ನು ವಿಚಾರಣೆಗೆ ಕರೆದಿಲ್ಲ ಎಂದು ದೂರಲಾಗಿದೆ..

ಇನ್ನೊಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಪ್ರಕರಣ ರದ್ದು ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ.. ಯಾವುದೇ ಕಾನೂನುಬಾಹಿರ ಕೃತ್ಯವನ್ನು ನಾನು  ಎಸಗಿಲ್ಲ. ದೂರು ಕೊಟ್ಟ ಮಹಿಳೆಗೆ ಹೀಗೆ ಆರೋಪಗಳನ್ನು ಮಾಡುವುದೇ ಹವ್ಯಾಸವಾಗಿತ್ತು.. ಹಲವರ ಮೇಲೆ ಇದೇ ರೀತಿಯ ಸುಳ್ಳು ದೂರುಗಳನ್ನು ನೀಡಿದ್ದಳು.. ಹೀಗಾಗಿ, ಪ್ರಕರಣ ರದ್ದು ಮಾಡಬೇಕೆಂದು ಯಡಿಯೂರಪ್ಪ ಕೋರಿದ್ದಾರೆ..

 

Share Post