Lifestyle

ಔಷಧ ಗುಣಗಳುಳ್ಳ ಸ್ಪಟಿಕ ಹೂ, ಎಲೆ ಹಾಗೂ ಬೇರು: ಆರೋಗ್ಯಕ್ಕೆ ಒಳ್ಳೆಯದು

ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ ಮುಂದೆ ಮತ್ತು ರಸ್ತೆಬದಿಗಳಲ್ಲಿ ಡಿಸೆಂಬರ್ ಹೂವಿನ ಗಿಡ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ನೆಡಬೇಕಾಗಿಲ್ಲ..ಅಲ್ಲಲ್ಲಿ ಈ ಹೂವಿನ ಗಿಡ ಕಂಡುಬರುತ್ತದೆ. ಇವುಗಳನ್ನು ಗೋಬಿ ಹೂಗಳು ಮತ್ತು ದೊಡ್ಡ ಗೋರಂಟಿ, ಸ್ಪಟಿಕ ಎಂದೂ ಕರೆಯುತ್ತಾರೆ. ಈ ಹೂವುಗಳನ್ನು ಹೆಚ್ಚಾಗಿ ಪೂಜೆ ಹಾಗೂ ಹೆಣ್ಣು ಮಕ್ಕಳು ಮುಡಿದುಕೊಳ್ಳಲು ಬಳಸುತ್ತಾರೆ.

ಈ ಹೂವುಗಳು ಚಳಿಗಾಲದಲ್ಲಿ ವಲಸೆ ಹೋಗುವ ಸಣ್ಣ ಹಕ್ಕಿಗಳಿಗೆ ಗೂಡು ಒದಗಿಸುತ್ತವೆ. ನೇರಳೆ, ಗೋಲ್ಡನ್, ವಿರಳವಾಗಿ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದಲ್ಲಿ ಈ ಹೂವುಗಳು ಲಭ್ಯವಿದೆ. ಇದು ನವೆಂಬರ್ ಅಂತ್ಯದಿಂದ ಫೆಬ್ರವರಿ ಅಂತ್ಯದವರೆಗೆ ಲಭ್ಯವಿರುತ್ತದೆ

ಈ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯದ ಎಲೆಗಳನ್ನು ಕೆಮ್ಮು ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಬೇರುಗಳು ಮತ್ತು ಎಲೆಗಳು ಶೀತ ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ. ಹೆಪಾಟಿಕ್ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಸಸ್ಯದ ಬೀಜಗಳನ್ನು ಹಾವು ಕಡಿದರೆ ವಿಷ ತೆಗೆಯಲು ಬಳಸುತ್ತಾರೆ.

ಈ ಸಸ್ಯವನ್ನು ಆಯುರ್ವೇದದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಾಮಬಾಣ ಎಂದು ಕರೆಯಲಾಗುತ್ತದೆ. ಡಿಸೆಂಬರ್ ಹೂವಿನ ಸಸ್ಯವನ್ನು ರಕ್ತವನ್ನು ಶುದ್ಧೀಕರಿಸಲು ಮತ್ತು ಮಧುಮೇಹ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬೇರುಗಳ ರಸವು ಅಜೀರ್ಣಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಡಿಸೆಂಬರ್ ಸಸ್ಯದ ಎಲೆಗಳ ರಸವನ್ನು ಸುಟ್ಟಗಾಯಗಳ ಉರಿಯೂತವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಮೂತ್ರದ ಸೋಂಕು ಮತ್ತು ರಕ್ತ ಶುದ್ಧೀಕರಣಕ್ಕೆ ಔಷಧದಲ್ಲಿ ಬಳಸಲಾಗುತ್ತದೆ.

Share Post