ಬಾದಾಮ್ ಪುರಿ ತಯಾರ್ ಮಾಡುವುದು ಹೇಗೆ?
ಮನೆಯಲ್ಲಿ ಸುಮ್ಮನೆ ಕುತೂಕೊಂಡರೆ ಸಾಕು ಏನಾದ್ರೂ ಖರ ಮತ್ತು ಸಿಹಿ ತಿನ್ನಿಸನ್ನು ತಿಂದುಬೇಕು ಅನ್ಸುತ್ತೆ. ಹೀಗಾಗಿ ಬೇಗ ಸಮಯದಲ್ಲಿ ಆಗುವಂತಹ ತಿಂಡಿಯನ್ನು ಮಾಡಲು ಹುಡುಕುತ್ತಾರೆ. ಅದೇ ಇಲ್ಲೊಂದು ಸುಲಭವಾಗಿ ಬಾದಾಮ್ ಪುರಿ ಮಾಡಿಕೊಂಡು ಸವಿಯಿರಿ. ಅದು ಮಾಡುವ ವಿಧಾನ ಈ ಕೆಳಗಿವಂತಿದೆ.
ಬೇಕಾಗುವ ಸಾಮಗ್ರಿಗಳು:
* ಮೈದಾಹಿಟ್ಟು-1 ಕಪ್
* ರವೆ- ಅರ್ಧ ಕಪ್
* ಅಕ್ಕಿಹಿಟ್ಟು-2 ಚಮಚ
* ತುಪ್ಪ- ಅರ್ಧ ಕಪ್
* ಸಕ್ಕರೆ – 2 ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ಕೇಸರಿ ಬಣ್ಣ – ಸ್ವಲ್ಪ
* ಜಾಯಿಕಾಯಿ ಪುಡಿ – ಸ್ವಲ್ಪ
* ಅಡುಗೆ ಎಣ್ಣೆ- 2 ಕಪ್
ಮಾಡುವ ವಿಧಾನ
ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರಣ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲೆಸಿಕೊಳ್ಳಬೇಕು.
ಮತ್ತೊಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕ ಬರುತ್ತಿದ್ದಂತೆಯೇ ಕೇಸರಿ ಬಣ್ಣ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಸೇರಿಸಿ ಕಲೆಸಿ ಒಲೆಯಿಂದ ಕೆಳಗಿಳಿಸಿಟ್ಟುಕೊಂಡಿರಬೇಕು.
ಈಗಾಗಲೇ ತಯಾರಿಸಿಟ್ಟ ಮಿಶ್ರಣದಿಂದ ತೆಳುವಾದ ಪೂರಿ ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಚಿ ಅಂಚುಗಳನ್ನು ಸಮನಾಗಿ ಒತ್ತಿ
ಈಗ ಲಟ್ಟಿಸಿದ ಪೂರಿಯನ್ನು ಎಣ್ಣೆಯಲ್ಲಿ ಕರಿಯಿರಿದು, ಈ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ರುಚಿಯಾದ ಬಾದಾಮ್ ಪುರಿ ಸವಿಯಲು ಸಿದ್ಧವಾಗುತ್ತದೆ.