Cinema

ನನಗೆ ಐಟಂ ಹಾಡುಗಳಲ್ಲೆವೂ ಭಕ್ತಿಪೂರ್ವಕ ಹಾಡುಗಳೇ:ಡಿಎಸ್‌ಪಿ

ಹೈದರಾಬಾದ್:‌ ಪುಷ್ಪ ಸಿನಿಮಾದ ಐಟಂ ಸಾಂಗ್‌ ಉ ಅಂಟಾವಾ ಮಾವಾ..ಉಹೂ ಅಂಟಾವಾ ಮಾವಾ.. ಹಾಡು ಬಹಳ ವೈರಲ್‌ ಆಗಿದೆ. ಅಲ್ಲದೆ ಈ ಹಾಡಿನ ಸುತ್ತ ಕೆಲವು ವಿವಾದಗಳು ಕೂಡ ಸುಳಿದಾಡಿದ್ವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ನನಗೆ ಎಲ್ಲವೂ ಹಾಡುಗಳು ಭಕ್ತಿಪೂರ್ವಕವೇ, ಬೇಕಾದ್ರೆ ನಾನು ಈ ಹಾಡನ್ನು ಡಿವೋಷನಲ್‌ ಆಗಿ ಹಾಡಿ ತೋರಿಸ್ತೀನಿ ಅಂತ ದೈವ ಭಕ್ತಿ ಲಿರಿಕ್ಸ್‌ ಹಾಕಿ ಎರಡು ಲೈನ್‌ ಅನ್ನು ಹಾಡಿ ತೋರಿಸಿದ್ರು. ಒಬ್ಬ ಸಂಗೀತ ನಿರ್ದೇಶಕನಾಗಿ ನನಗೆ ಸಂಗೀತ ಮಾತ್ರ ಮುಖ್ಯ ಆಗುತ್ತೆ ಅದು ಐಟಂ ಸಾಂಗ್‌, ಬೇರೆ ಸಾಂಗ್‌ ಎಂಬ ಭೇದ ನನ್ನಲ್ಲಿಲ್ಲ ಎಂದ್ರು. ನಾನು ಕಂಪೋಸ್‌ ಮಾಡುವ ಹಾಡು ಜನರ ಮನಸ್ಸಲ್ಲಿ ಯಾವತ್ತಿಗೂ ನೆನಪಿರುವ ಹಾಗೆ ಮಾಡಿದ್ರೆ ಅದಕ್ಕಿಂತ ಬೇರೆ ಕೀರ್ತಿ ಮತ್ತೊಂದಿಲ್ಲ ಎಂದ್ರು. ಈಗ ಪುಷ್ಟ ಸಿನಿಮಾದ ಈ ಐಟಂ ಹಾಡಿಗೆ ಡಿವೋಷನಲ್‌ ಸಿಂಗರ್‌ ಶೋಭರಾಜ್‌ ಅವರು ಉ ಅಂಟಾವಾ.. ಮಾಧವ ಎಂದು ಭಕ್ತಿಪೂರ್ವಕವಾಗಿ ಹಾಡಿದ್ದಾರೆ ಎನ್ನಲಾಗಿದೆ.

Share Post