LifestyleNational

ಅನಂತ್‌ ಅಂಬಾನಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ; ಗಮನ ಸೆಳೆಯ ನೀತೂ ಅಂಬಾನಿ ನೃತ್ಯ

ಜಾಮ್‌ನಗರ್‌; ಮುಖೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನು ಮದುವೆ ಜುಲೈನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರ್‌ನಲ್ಲಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ ನಡೆಯಿತು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಗಣ್ಯರೆಲ್ಲಾ ಪಾಲ್ಗೊಂಡಿದ್ದರು. ಸಿನಿ ಸ್ಟಾರ್‌ಗಳು ಪ್ರದರ್ಶನಗಳನ್ನು ನೀಡಿದರು. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ನೃತ್ಯ ಪ್ರದರ್ಶನ ಗಮನ ಸೆಳೆಯಿತು. 

ವಿಶ್ವಾಂಬರಿ ಸ್ತುತಿಗೆ ವಿಶೇಷ ನೃತ್ಯ;

ವಿಶ್ವಾಂಬರಿ ಸ್ತುತಿಗೆ ವಿಶೇಷ ನೃತ್ಯ; ಮುಖೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ, ತಮ್ಮ ಮಗ ಹಾಗೂ ಭಾವಿ ಸೊಸೆಯ ದಾಂಪತ್ಯ ಚೆನ್ನಾಗಿರಲಿ ಎಂಬ ಕಾರಣಕ್ಕೆ ವಿಶೇಷ ನೃತ್ಯ ಪ್ರದರ್ಶನ ನೀಡಿದರು. ಮಾತೆ ಅಂಬೆಗಾಗಿ ಪ್ರಾರ್ಥನೆ ಮಾಡುವ ವಿಶ್ವಾಂಭರಿ ಸ್ತುತಿ ಇದಾಗಿದೆ. ಈ ಸ್ತುತಿಗೆ ನೀತಾ ಅಂಬಾನಿಯವರು ನೃತ್ಯ ಪ್ರದರ್ಶನ ಮಾಡಿದರು. ಇದು ಎಲ್ಲರ ಗಮನ ಸೆಳೆಯಿತು. ಈ ವಯಸ್ಸಿನಲ್ಲೂ ಅವರು ಅದ್ಭತವಾಗಿ ನೃತ್ಯ ಪ್ರದರ್ಶನ ಮಾಡಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಈವೆಂಟ್‌;

ಮೂರು ದಿನಗಳ ಕಾಲ ನಡೆದ ಈವೆಂಟ್‌; ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ಈ ಈವೆಂಟ್‌ ನಡೆಯಿತು. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ದೇಶ ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್‌ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶನ ಮಾಡಿದ್ದಾರೆ.

ಇನ್ನು ನೀತಾ ಅಂಬಾನಿಯವರು ಕೂಡಾ ಕೊನೆಯ ದಿನ ನೃತ್ಯ ಪ್ರದರ್ಶನ ಮಾಡಿದರು. ಮಗ ಹಾಗೂ ಸೊಸೆಯ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಈ ನೃತ್ಯ ಮಾಡಿದರು. ನೀತಾ ಅಂಬಾನಿ ಅವರ ನೃತ್ಯ ಹಾಗೂ ಅಭಿನಯ ಎಲ್ಲರ ಮೆಚ್ಚುಗೆ ಕಾರಣವಾಯಿತು. ನೀತಾ ಅಂಬಾನಿ ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದರು. ಇದಕ್ಕಾಗಿ ಅವರು ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿದ್ದರು. ಸದ್ಯ ನೀತಾ ಅಂಬಾನಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಎಲ್ಲಾ ಕಡೆ ಈ ಬಗ್ಗೆ ಚರ್ಚೆಯಾಗುತ್ತಿದೆ. ಕೊನೆಗೆ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಡ್​ ಜೋಡಿಯ ಹಸ್ತಾಕ್ಷರದ ಮೂಲಕ ಮೂರು ದಿನಗಳ ಅದ್ಧೂರಿ ಪ್ರೀ ವೆಡ್ಡಿಂಗ್​ ಈವೆಂಟ್‌ಗೆ ಭರ್ಜರಿ ತೆರೆ ಬಿದ್ದಿದೆ. ಜುಲೈ 12ರಂದು ಮುಂಬೈನಲ್ಲಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೆಯಲಿದೆ.

 

ಪ್ರೀ ವೆಡ್ಡಿಂಗ್‌ ಈವೆಂಟ್‌ ಗೇ ಇಷ್ಟೊಂದು ಅದ್ಧೂರಿತನ ಇತ್ತು. ಇನ್ನು ಮದುವೆ ಸಂಭ್ರಮ ಇನ್ನೆಷ್ಟು ಅದ್ದೂರಿಯಾಗಿರುತ್ತೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಈವೆಂಟ್‌ ಹಾಗೂ ಇದಕ್ಕೆ ಖರ್ಚು ಮಾಡಿರುವ ಕೋಟ್ಯಂತರ ಹಣದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಕೆಲವರು ಇಷ್ಟೊಂದು ಹಣವನ್ನು ವೇಸ್ಟ್‌ ಮಾಡಬಾರದಿತ್ತು ಎಂದರೆ, ಇನ್ನು ಕೆಲವರು ಅವರ ದುಡ್ಡು ಅವರು ಎಂಜಾಯ್‌ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಶ್ರೀಮಂತ ಉದ್ಯಮಿ ಮನೆಯ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ ಇಡೀ ವಿಶ್ವದ ಗಮನ ಸೆಳೆದಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ.

 

Share Post