International

ಮೇಲೆ ಬಾಂಬ್‌ಗಳ ದಾಳಿ, ಮೆಟ್ರೋ ಅಂಡರ್‌ಗ್ರೌಂಡ್‌ನಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿದ ತಾಯಿ

ಉಕ್ರೇನ್:‌ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ  ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಬರೀ  ಮಿಲಿಟರಿ ದಾಳಿ, ಬಾಂಬ್ ದಾಳಿ ಮತ್ತು ವೈಮಾನಿಕ ದಾಳಿಯ ಶಬ್ದವೇ ಹೆಚ್ಚಿದೆ. ಬಾಂಬ್‌ ಸ್ಪೋಟದ ನಡುವೆ 23  ವರ್ಷದ ಗರ್ಭಿಣಿ ನವಜಾತ ಶಿಶುವಿಗೆ ಜನ್ಮ ನೀಡಿದ್ದಾರೆ.  ಜೀವ ಉಳಿಸಿಕೊಳ್ಳಲು ಹೋದ ಮೆಟ್ರೋ ಅಂಡರ್‌ ಗ್ರೌಂಡ್‌ ಒಳಗೆ ಹೋದ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಾಂಬುಗಳು, ಕ್ಷಿಪಣಿಗಳು ಮತ್ತು ವಾಯುದಾಳಿಗಳ ನಡುವೆ ಒಂದು ಜೀವ ಜಗತ್ತನ್ನು ನೋಡಲು ಆಚೆ ಬಂದಿದೆ.

ಶುಕ್ರವಾರ (ಫೆಬ್ರವರಿ 25, 2022) ರಾತ್ರಿ 8.30 ರ ಸುಮಾರಿಗೆ,  ಮೆಟ್ರೋ ನಿಲ್ದಾಣದ ಅಂಡರ್‌ ಗ್ರೌಂಡ್‌ ನಲ್ಲಿ ಅಡಗಿಕೊಂಡಿದ್ದ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ವೈದ್ಯಕೀಯ ಸಿಬ್ಬಂದಿಯೊಬ್ಬರು ಸಹಾಯ ಮಾಡಿದ್ದಾರೆ. ಹೆರಿಗೆ ನೋವು ತಾಳಲಾರದೆ ಜೋರಾಗಿ ಕಿರುಚಿದ ಶಬ್ದ ಕೇಳಿ ಉಕ್ರೇನ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ್ರು.

ಅಲ್ಲಿಯೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ರಷ್ಯಾದ ಪಡೆಗಳ ಆಕ್ರಮಣದ ನಡುವೆ ಉಕ್ರೇನ್‌ನಲ್ಲಿ ರಕ್ತಪಾತದ ಸಮಯದಲ್ಲಿ ಮಗು ತನ್ನ ತನ್ನ ಪುಟ್ಟ ಕಾಲುಗಳನ್ನು ಯುದ್ಧದ ಜಗತ್ತಿಗೆ ಪ್ರವೇಶಿಸಿದೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Share Post