ನಾನು ಯಾರಿಗೂ ಹೆದರಲ್ಲ; ನಾನು ಕೀವ್‌ನಲ್ಲೇ ಇದ್ದೇನೆ ಎಂದ ಉಕ್ರೇನ್ ಅಧ್ಯಕ್ಷ
ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರಷ್ಯಾಗೆ ಉತ್ತರ ನೀಡಿದ್ದಾರೆ. ಝೆಲೆನ್‌ಸ್ಕಿ ಉಕ್ರೇನ್ ರಾಜಧಾನಿ ಕೀವ್‌ನ ತನ್ನ ಕಚೇರಿ ಸುತ್ತಮುತ್ತಲಿನ ದೃಶ್ಯಗಳನ್ನು ತೋರಿಸಿದ್ದು, ಈ ಮೂಲಕ ನಾನು ಕೀವ್‌ನಲ್ಲೇ ಇದ್ದೇನೆ ಎಂದು ಸಾಕ್ಷೀಕರಿಸಿದ್ದಾರೆ.
ನಾನು ಕೀವ್‌ನ ಬಂಕೊವಾ ಬೀದಿಯಲ್ಲೇ ಉಳಿದುಕೊಂಡಿದ್ದೇನೆ. ನಾನು ಅಡಗಿಕೊಂಡಿಲ್ಲ ಮತ್ತು ನಾನು ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿಯ ಯುದ್ಧವನ್ನು ಗೆಲ್ಲಲು ಎಷ್ಟು ಸಮಯ ಬೇಕಾಗುತ್ತದೋ ಅಲ್ಲಿಯವರೆಗೆ ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ ಫೇಸ್‌ಬುಕ್‌ನಲ್ಲಿ ಝೆಲೆನ್‌ಸ್ಕಿ ಹೇಳಿಕೊಂಡಿದ್ದಾರೆ. ರಷ್ಯಾ ಜೊತೆಗಿನ ಮಾತುಕತೆಯು ರಾಜಕೀಯ ಮತ್ತು ಮಿಲಿಟರಿ ವಿಚಾರಗಳ ಕುರಿತಾಗಿದೆ. ಮಾತುಕತೆಯಿಂದ ಯಾವುದೇ ಪರಿಹಾರ ಲಭ್ಯವಾಗಿಲ್ಲ. ಈಗಲೇ ಏನನ್ನೂ ಹೇಳಲಾಗುವುದಿಲ್ಲ ಎಂದೂ ವ್ಲಾಡಿಮಿರ್ ಮೆಡಿನ್‌ಸ್ಕಿ ತಿಳಿಸಿದ್ದಾರೆ.
ನಿರ್ದಿಷ್ಟ ಒಪ್ಪಂದಗಳು ಸೇರಿದಂತೆ ರಷ್ಯಾ ದೊಡ್ಡ ಪ್ರಮಾಣದ ದಾಖಲೆಗಳನ್ನು ತಂದಿತ್ತು. ಆದರೆ ಉಕ್ರೇನ್ ಇವುಗಳಿಗೆ ಅಲ್ಲಿಯೇ ಸಹಿ ಹಾಕಲಿಲ್ಲ ಮತ್ತು ಈ ಎಲ್ಲ ದಾಖಲೆಗಳನ್ನು ಅಧ್ಯಯನಕ್ಕಾಗಿ ಕೊಂಡೊಯ್ದಿದೆ ಎಂದೂ ಅವರು ಬರೆದುಕೊಂಡಿದ್ದಾರೆ.