ಬಹುಮೊತ್ತಕ್ಕೆ ಹರಾಜಾದ ಟಿಪ್ಪು ವಿಜಯದ ವರ್ಣಚಿತ್ರ: ಯುದ್ಧ ಸನ್ನಿವೇಶಗಳ ಚಿತ್ರಣ
ಲಂಡನ್: 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನ್ ವಿಜಯ ಸಾಧಿಸಿದ್ದರ ಗುರುತಾಗಿ ವರ್ಣಚಿತ್ರವನ್ನು ಬಿಡಿಸಿದ್ದರು. ಆ ಪಟ್ಕಕೆ ಇದೀಗ ಭಾರಿ ಬೇಡಿಕೆ ಬಂದಿದೆ. ಆಂಗ್ಲೋ-ಮೈಸೂರು ಯುದ್ಧವು 242 ವರ್ಷಗಳ ಹಿಂದೆ ಸೆಪ್ಟೆಂಬರ್ 10 ರಂದು ನಡೆಯಿತು. ಇದನ್ನು ‘ಪೊಲ್ಲಿಲೂರ್ ಕದನ’ ಎಂದು ಕರೆಯಲಾಗುತ್ತದೆ. ಟಿಪ್ಪು ಸುಲ್ತಾನ್ ಈ ಯುದ್ಧದಲ್ಲಿ ತನ್ನ ವಿಜಯದ ಸ್ಮರಣಾರ್ಥವಾಗಿ ವರ್ಣಚಿತ್ರವನ್ನು ಬಿಡಿಸಿದನು.
32 ಅಡಿ ಉದ್ದದ ಈ ಪೇಂಟಿಂಗ್ಅನ್ನು ಲಂಡನ್ ನ ಸದಾಬೀಸ್ ಹರಾಜು ಹೌಸ್ ನಲ್ಲಿ ಹರಾಜಿಗೆ ಇಡಲಾಗಿತ್ತು. ವಿಶ್ವ ಹಾಗೂ ಭಾರತ ಮಟ್ಟದಲ್ಲಿ ವಿಶೇಷ ಆಕರ್ಷಣೆಯಾದ ಈ ಚಿತ್ರ ಬರೋಬ್ಬರಿ ರೂ. 6.27 ಕೋಟಿ (ಲಕ್ಷ 6.30 ಲಕ್ಷ). ಹರಾಜಾಗಿದೆ.
ಈ ಪೇಂಟಿಂಗ್ ನಲ್ಲಿ ಯುದ್ಧದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಲಾಗಿದೆ. ಇದು ನಿಸ್ಸಂದೇಹವಾಗಿ ಉಳಿದಿರುವ ವಸಾಹತುಶಾಹಿ ಸೋಲಿನ ಕುರಿತಾದ ಶ್ರೇಷ್ಠ ಭಾರತೀಯ ವರ್ಣಚಿತ್ರವಾಗಿದೆ. ಇದು ಒಂದು ಅನನ್ಯ ಮತ್ತು ಅದ್ಭುತವಾದ ಕಲಾಕೃತಿಯಾಗಿದೆ ಎಂದು ಸೋಥೆಬಿಯ ತಜ್ಞ, ದಿ ಅನಾರ್ಕಿ: ದಿ ರಿಲೇಟಿವ್ ರೈಸ್ ಆಫ್ ದಿ ಈಸ್ಟ್ ಇಂಡಿಯಾ ಕಂಪನಿಯ ಲೇಖಕ ವಿಲಿಯಂ ಡಾಲ್ರಿಂಪಲ್ ಹೇಳಿದರು.
Mysorean troops surrounding the British at the Battle of Polilur (1780). This 200 year old painting is almost 10 metres long & is loaded with details… (1/6)
 pic.twitter.com/G9z1AfY1T6— Dr Jennifer Howes (@jhowesuk) March 27, 2022
ಈಸ್ಟ್ ಇಂಡಿಯಾ ಕಂಪನಿ ಎದುರಿಸಿದ ಅತ್ಯಂತ ಪ್ರಭಾವಿ ಎದುರಾಳಿ ಟಿಪ್ಪು ಸುಲ್ತಾನ್. ಭಾರತೀಯರು ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿ, ಭಾರತದಲ್ಲಿ ಯುರೋಪಿಯನ್ ಸೈನ್ಯವನ್ನು ಸೋಲಿಸುವುದು ಈ ಪೊಲ್ಲಿಲೂರ್ ಯುದ್ಧದಲ್ಲಿ ಮೊದಲು.