InternationalScienceTechnology

ಕೊರೊನಾ ವೈರಸ್‌ ಲ್ಯಾಬ್‌ನಿಂದಲೇ ಸೋರಿಕೆಯಾಗಿರಬಹುದು; ಚೈನಾ ವಿಜ್ಞಾನಿ

ಬೀಜಿಂಗ್‌; ಕರೋನವೈರಸ್ ಲ್ಯಾಬ್‌ನಿಂದ ಸೋರಿಕೆಯಾಗಿರಬಹುದು. ಈ ಅನುಮಾನವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಈ ಹಿಂದೆ ಚೀನಾ ಸರ್ಕಾರದಲ್ಲಿ ಕೆಲಸ ಮಾಡಿದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಕೊರೋನಾ ವೈರಸ್‌ ಮೂಲದ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದ್ರೆ ಲ್ಯಾಬ್‌ನಿಂದ ಆಕಸ್ಮಿಕ ಸೋರಿಕೆಯಾಗಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಈ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಜಾರ್ಜ್ ಗಾವೊ ಈ ಮಾತನ್ನು ಹೇಳಿದ್ದಾರೆ. ಕೆಲವರು ಕೊರೊನಾ ವೈರಸ್‌ ಪ್ರಾಣಿಗಳಿಂದ ಹರಡಿದೆ ಎಂದು ಹೇಳುತ್ತಿದ್ದಾರೆ. ಅನೇಕ ವಿಜ್ಞಾನಿಗಳು ಇದನ್ನೇ ನಂಬಿದ್ದಾರೆ. ಆದ್ರೆ ಕೆಲವರು ಚೈನಾದ ಲ್ಯಾಬ್‌ನಿಂದ ಆಕಸ್ಮಿಕವಾಗಿ ಕೊರೊನಾ ವೈರಸ್‌ ಲೀಕ್‌ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಯಾವುದೂ ಇನ್ನೂ ಅಧಿಕೃತವಾಗಿಲ್ಲ. ಆದ್ರೆ ಲ್ಯಾಬ್‌ನಿಂದ ಸೋರಿಕೆ ಆಗಿದ್ದರೂ ಆಗಿರಬಹುದು. ಆ ವಾದವನ್ನು ಅಲ್ಲಗೆಳೆಯುವಂತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

2019ರ ಕೊನೆಗೆ ಯಲ್ಲಿ ಕೊರೊನಾ ವೈರಸ್‌ ಮನುಷ್ಯರ ಮೇಲೆ ದಾಳಿ ಮಾಡಿತ್ತು. ಅದು ಪ್ರಪಂಚದಾದ್ಯಂತ ಜನರನ್ನು ಕಾಡಿತ್ತು. ಕೋಟ್ಯಂತರ ಜನ ಈ ಕೊರೊನಾ ವೈರಸ್‌ನಿಂದ ಸಂಕಷ್ಟ ಅನುಭವಿಸಿದ್ದರು. ಚೈನಾದಿಂದ ಹರಡಿದ ಈ ವೈರಸ್‌ ಇಡೀ ಪ್ರಪಂಚ ವ್ಯಾಪಿಸಿತ್ತು. ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿತ್ತು. ಈಗಲೂ ಇದರ ಭೀತಿ ಇದ್ದೇ ಇದೆ.

 

Share Post