International

ರಷ್ಯಾ ಸೇನೆಯನ್ನು ನಿಯಂತ್ರಿಸಲು ಬಾಂಬ್‌ ಸ್ಫೋಟಿಸಿಕೊಂಡು ಪ್ರಾಣತ್ಯಾಗ ಮಾಡಿದ ಸೈನಿಕ

ಉಕ್ರೇನ್:‌ ರಷ್ಯಾ ಪಡೆಗಳು ತಮ್ಮ ಪ್ರದೇಶವನ್ನು ಪ್ರವೇಶಿಸದಂತೆ ತಡೆಯಲು ಉಕ್ರೇನಿಯನ್ ಸೈನ್ಯವು ತೀವ್ರವಾಗಿ ಪ್ರಯತ್ನಿಸುತ್ತಿದೆ. ದೇಶಕ್ಕಾಗಿ ಪ್ರಾಣ ತೆಗೆಯುವುದಕ್ಕೂ ಪ್ರಾಣ ನೀಡುವುದಕ್ಕೂ ಸಿದ್ದರಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾ ಸೇನೆಯನ್ನು ತಡೆಯಲು ಉಕ್ರೇನಿಯನ್ ಸೈನ್ಯದಲ್ಲಿ ಆರ್ಮಿ ಇಂಜಿನಿಯರ್ ಆಗಿದ್ದ ವ್ಯಾಲೋಡಿಮಿರೊ ವಿಚ್ ಸ್ಕಕುನ್ ಎಂಬ ಸೈನಿಕ ತಮ್ಮನ್ನು ತಾವೇ ಸ್ಪೋಟಿಸಿಕೊಂಡಿದ್ದಾರೆ.

ರಷ್ಯಾ ಉಕ್ರೇನ್‌  ಭೂಭಾಗವನ್ನು ಪ್ರವೇಶಿಸಲು  ಹೊರಟಿದ್ದ ಕ್ರಿಮಿಯನ್ ಇಸ್ತಮಸ್ ಈ ಪ್ರದೇಶದಲ್ಲಿ ಬಾಂಬ ಸ್ಫೋಟಸಿಕೊಂಡು ಸೈನಿಕ ವೀರಮರಣವನ್ನು ಹೊಂದಿದ್ದಾನೆ.  ಜೆನಿಸ್ಕಿ ಸೇತುವೆಯನ್ನು ಬ್ಲಾಸ್ಟ್‌ ಮಾಡುವಲ್ಲಿ ಸ್ಕಕೂನ್ ಪ್ರಮುಖ ಪಾತ್ರ ವಹಿಸಿದ್ದರು. ಸೇತುವೆ ಸ್ಫೋಟಗೊಳ್ಳುವ ಮೊದಲು ಸೇತುವೆಯಿಂದ ಓಡಬೇಕು ಇದರಿಂದ ತಾನು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂಬುದನ್ನು ಅರಿತಿದ್ದರೂ ಕೂಡ ಸೇತುವೆ ಬ್ಲಾಸ್ಟ್‌ ಮಾಡಲು ಒಪ್ಪಿಕೊಂಡರು.

ಸ್ಕಕೂನ್‌ನ ಮರಣವು ಉಳಿದ ಸೈನಿಕರಿಗೆ ರಷ್ಯಾದ ಪಡೆಗಳನ್ನು ಹಿಮ್ಮೆಟ್ಟಿಸಲು ಸ್ವಲ್ಪ ಸಮಯವನ್ನು ನೀಡಿತು. ಸ್ಕಕೂನ್ ಧೈರ್ಯದ ನಿರ್ಧಾರಕ್ಕೆ ಅನುಗುಣವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸುವುದಾಗಿ ಮೆರೈನ್ ಕಮಾಂಡ್ ಜನರಲ್ ತಿಳಿಸಿದ್ರು.

ಘಟನೆ ಬಳಿಕ “ನಾವು ಬದುಕಿರುವವರೆಗೂ ಹೋರಾಡುತ್ತೇವೆ, ನಾವು ಬದುಕಿರುವವರೆಗೂ ಹೋರಾಡುತ್ತೇವೆ. ರಷ್ಯಾದ ಆಕ್ರಮಣಕಾರರೇ, ನಿಮ್ಮ ಪಾದದ ಕೆಳಗಿನ ನೆಲವು ಯಾವಾಗಲೂ ಬೆಂಕಿಯಂತೆ ಉರಿಯುತ್ತಿರುತ್ತದೆ ಎಂಬುದನ್ನು ನೆನಪಿಡಿ” ಎಂದು ಸೇನಾ ಸಿಬ್ಬಂದಿ ಪೋಸ್ಟ್ ಮಾಡಿದ್ದಾರೆ.

Share Post