CinemaCrimeNational

ನನ್ನ ತಂದೆಯೇ ನನಗೆ ಲೈಂಗಿಕ ಕಿರುಕುಳ ನೀಡಿದ್ದರು; ನಟಿ ಖಷ್ಬು ಆಘಾತಕಾರಿ ಹೇಳಿಕೆ

ಮುಂಬೈ; ಸಿನಿಮಾ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸಮಾಜವೇ ತಲೆತಗ್ಗಿಸುವ ವಿಚಾರವೊಂದರನ್ನು ಹಂಚಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಅವರು ತಮ್ಮ ತಂದೆಯಿಂದಲೇ ಅನುಭವಿಸಿದ ಯಾತನೆಯನ್ನು ಹೇಳಿಕೊಂಡಿದ್ದಾರೆ. ಚಿಕ್ಕವಳಿದ್ದಾಗ ನನ್ನ ತಂದೆಯೇ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಆಘಾತಕಾರಿ ವಿಚಾರವನ್ನು ಖಷ್ಬು ಬಯಲು ಮಾಡಿದ್ದಾರೆ. 

   ಮಹಿಳಾ ದಿನಾಚರಣೆ ಹತ್ತಿರವಾಗುತ್ತಿರುವಾಗಲೇ ಖಷ್ಬೂ ಇಂತಹ ವಿಚಾರ ಹೇಳಿಕೊಂಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಬಾಲ್ಯದಲ್ಲಿ ತನಗೆ ನಡೆದ ಘಟನೆಯೊಂದನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ನೀವು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ, ಅದು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಈ ವಿಚಾರದಲ್ಲಿ ಹುಡುಗ ಹುಡುಗಿ ಎಂಬ ಭೇದವಿಲ್ಲ. ನನ್ನ ತಂದೆ ಚಿಕ್ಕಂದಿನಿಂದಲೂ ನನ್ನ ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದರು. ನನ್ನ ತಂದೆ, ತನ್ನ ಹೆಂಡತಿಯನ್ನು ಹೊಡೆಯುವುದು ಮತ್ತು ತನ್ನ ಕಿರಿಯ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸುವ ವ್ಯಕ್ತಿ ಎಂದು ಖುಷ್ಬು ಗೋಳು ಹೇಳಿಕೊಂಡಿದ್ದಾರೆ.  

   ನನ್ನ ತಂದೆ ನನಗೆ 8 ವರ್ಷ ವಯಸ್ಸಿನಿಂದಲೂ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದರು. ಆದರೆ ಅದನ್ನು ಎದುರಿಸುವ ಧೈರ್ಯ ಬಂದಿದ್ದು ನನ್ನ 15ನೇ ವಯಸ್ಸಿನಲ್ಲಿ. ನಾನು ಇಷ್ಟು ವರ್ಷ ಸುಮ್ಮನಿರಲು ಕಾರಣವೇನೆಂದರೆ ನನ್ನ ಕುಟುಂಬದವರು ನನ್ನ ಮೇಲೆ ಆರೋಪ ಮಾಡುತ್ತಾರೆ ಎಂಬ ಭಯ. ಆದರೆ ಈಗ ನಾನು ನನ್ನ ಬಾಯಿ ತೆರೆದು ನಾನು ಅನುಭವಿಸಿದ ನರಕದ ಬಗ್ಗೆ ಎಲ್ಲರಿಗೂ ಹೇಳಲು ಬಯಸುತ್ತಿದ್ದೇನೆ ನನ್ನ ತಂದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ನನ್ನ ತಾಯಿಗೆ ಹೇಳಿದರೆ ಅವರು ನನ್ನನ್ನು ನಂಬುವುದಿಲ್ಲ. ಯಾಕೆಂದರೆ ಅಪ್ಪ ಏನೇ ಮಾಡಿದರೂ ದೇವರ ಸಮಾನವಾಗಿ ಕಾಣುವ ಸ್ವಭಾವ ನನ್ನ ತಾಯಿಯದ್ದು.

   ಸಹಜವಾಗಿ, ನಾನು 15 ವರ್ಷದಳಿದ್ದಾಗ  ನನ್ನ ತಂದೆ ನನಗೆ ಕಿರುಕುಳ ನೀಡಲು ಬಂದಾಗ ಮೊದಲ ಬಾರಿ ವಿರೋಧಿಸಿದ್ದೆ. ಅನಂತರ ನನಗೆ 16 ವರ್ಷವಾದಾಗ, ನನ್ನ ತಂದೆ ನಮ್ಮನ್ನು ತೊರೆದರು. ಇದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎಂದು ಖುಷ್ಬು ಹೇಳಿಕೊಂಡಿದ್ದಾರೆ.

 

Share Post