International

ಉತ್ತರ ಉಕ್ರೇನ್‌ನಿಂದ ರಷ್ಯಾ ಸೇನೆ ಪೂರ್ಣ ಹಿಂತೆಗೆತ

ಲಂಡನ್: ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ನಿಧಾನಕ್ಕೆ ಹಿಂದಡಿ ಇಡುತ್ತಿದೆ.   ಉತ್ತರ ಉಕ್ರೇನ್‌ನಿಂದ ರಷ್ಯಾ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ ಎಂದು ಬ್ರಿಟಿಷ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ. ಉತ್ತರ ಉಕ್ರೇನ್, ಬೆಲಾರಸ್ ಮತ್ತು ರಷ್ಯಾವರೆಗೂ ಸೇನೆಯನ್ನು ವಾಪಸ್ ಪಡೆಯಲಾಗಿದೆ. ಹಿಂತೆಗೆದುಕೊಂಡ ರಷ್ಯಾದ ಈ ಪಡೆಗಳಲ್ಲಿ ಕೆಲವನ್ನು ಪೂರ್ವ ಉಕ್ರೇನ್‌ನ ಡಾನ್‌ಬಾಸ್‌ನ ಆಕ್ರಮಣಕ್ಕೆ ನಿಯೋಜಿಸಲಾಗುತ್ತದೆ.

ಅಲ್ಲದೆ, ಸೇನೆಯನ್ನು ಪೂರ್ವಕ್ಕೆ ನಿಯೋಜಿಸುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಉತ್ತರದಿಂದ ಪೂರ್ವಕ್ಕೆ ಯಾವುದೇ ಸೇನೆಯನ್ನು ಮರುಹಂಚಿಕೆ ಮಾಡುವಾಗ ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಎಂದು ರಕ್ಷಣಾ ಸಚಿವಾಲಯ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಉಕ್ರೇನ್ ಪೂರ್ವ ಮತ್ತು ದಕ್ಷಿಣದಲ್ಲಿರುವ ನಗರಗಳ ಮೇಲೆ ರಷ್ಯಾದ ಶೆಲ್ ದಾಳಿ ಮುಂದುವರಿದಿದೆ. ತಮ್ಮ ನಿಯಂತ್ರಣದಲ್ಲಿ ಉಳಿದಿರುವ ಇಜಿಯಮ್ ನಗರದಿಂದ ಮತ್ತಷ್ಟು ದಕ್ಷಿಣಕ್ಕೆ ರಷ್ಯಾದ ಪಡೆಗಳು ಮುಂದುವರಿದಿವೆ ಎಂದು ಹೇಳಿದೆ.

Share Post