RUSSIA-UKRAINE WAR: ಬಂಕರ್‌ಗಳಲ್ಲಿ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆ
ಕಾರ್ಕಿವ್: ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ರಾಜ್ಯದ ವಿದ್ಯಾರ್ಥಿಗಳೂ ನೂರಾರು ಜನ ಇದ್ದಾರೆ. ಇದ್ರಲ್ಲಿ ಹಲವು ಸಂಕಷ್ಟದಲ್ಲಿದ್ದಾರೆ. ಇಲ್ಲಿನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳಗಾವಿಯ ಏಳು ವಿದ್ಯಾರ್ಥಿಗಳು, ಹಾಸ್ಟೆಲ್‌ನ ನೆಲಮಹಡಿ, ಬಂಕರ್‌ಗಳಲ್ಲಿ ರಕ್ಷಣೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ರಷ್ಯಾ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಎಲ್ಲರೂ ಬಂಕರ್ ಸೇರಿದ್ದಾರೆ.
ಬೆಳಗಾವಿ ಜಿಲ್ಲೆಯ ಪ್ರಿಯಾ ಚಬ್ಬಿ, ಪ್ರೀತಿ ಚಬ್ಬಿ, ಶ್ರೇಯಾ ಹೆರಕಲ್,ಅಮೋಘ ಚೌಗಲಾ, ಪ್ರಿಯಾ ನಿಡಗುಂದಿ, ರಕ್ಷಿತ್ ಗಣಿ, ಅಫ್ರೀನ್ ಮದರಸಾಬ್ ಬೆಳಗಾವಿಯಲ್ಲಿ ಮೆಡಿಕಲ್ ಓದುತ್ತಿದ್ದಾರೆ. ಇವರೆಲ್ಲರೂ ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತಕ್ಕೆ ಬರಲು ತವಕಿಸುತ್ತಿದ್ದಾರೆ. ಇದಲ್ಲದೆ ಗದ್, ಉಡುಪಿ ಸೇರಿದಂರೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಕೂಡಾ ಉಕ್ರೇನ್‌ನ ಹಲವು ಕಡೆ ವಾಸವಿದ್ದಾರೆ.