ತಪ್ಪಿತಸ್ಥ ಮಗನಿಗೆ ಬುದ್ದಿ ಹೇಳಲು ಹೋಗಿ ಟೀಕೆಗೆ ಗುರಿಯಾದ ದಂಪತಿ
ಅಮೆರಿಕಾ: ಮಕ್ಕಳು ತಪ್ಪು ಮಾಡೋದು ಸಹಜ, ಅದನ್ನು ತಿದ್ದಿ ಹೇಳುವ ಕೆಲಸ ಹೆತ್ತವರದ್ದು. ಆದ್ರೆ ಶಿಸ್ತು ಕಲಿಸುವ ಪರಿ ಬೇರೆಯದ್ದೇ ಇದೆ ಅಂತ ಸಾಮಾಜಿಕ ಜಾಲತಾಣದಲ್ಲಿ ದಂಪತಿ ಟೀಕೆಗೆ ಗುರಿಯಾಗಿದ್ದಾರೆ. ಯುಎಸ್‌ಎನಲ್ಲಿ ತಪ್ಪು ಮಾಡಿದ ಮಗನನ್ನು ರಸ್ತೆಯಲ್ಲಿ ನಿಲ್ಲಿಸಿ ʻನಾನು ಪುಂಡʼ ನೀವು ಪುಂಡರನ್ನು ದ್ವೇಷಿಸುವುದಾದರೆ ಹಾರ್ನ್ ಮಾಡಿ ಎಂಬ ನಾಮಫಲಕವನ್ನು ಹಿಡಿಸಿ ಶಿಕ್ಷೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗನನ್ನು ಹೀಗೆ ರಸ್ತೆಯಲ್ಲಿ ನಿಲ್ಲಿಸಿ ಹೆತ್ತವರು ಬೆಂಚಿನ ಮೇಲೆ ಕುಳಿತಿರುವ ವಿಡಿಯೋಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲವಾದ್ರೂ ಹೀಗೆ ಸಾರ್ವಜನಿಕವಾಗಿ ಮಕ್ಕಳನ್ನು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ, ಇದರಿಂದ ಮಕ್ಕಳ ಮಾನಸಿಕ ಸ್ಥಿತಿ ಬದಲಾಗುವ ಸಾಧ್ಯತೆಯಿರುತ್ತದೆ. ನಾಲ್ಕು ಗೋಡೆ ಮಧ್ಯೆ ಬುದ್ದಿ ಹೇಳಬೇಕೆ ವಿನಃ ರಸ್ತೆಯಲ್ಲಿ ನಿಂತು ಅವಮಾನ ಮಾಡುವುದಲ್ಲ ಎಂದು ಎಂದು ಟೀಕೆ ಮಾಡಿದ್ದಾರೆ.