HealthInternational

ವಿಷಕಾರಿ ಜೇಡ ಕಚ್ಚಿ ಖ್ಯಾತ ಯುವ ಗಾಯಕ ಸಾವು!

ಬ್ರೆಜಿಲ್‌; ವಿಷಕಾರಿ ಜೇಡವೊಂದು ಕಚ್ಚಿದ್ದರಿಂದ ಅತಿಸಣ್ಣ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಗಳಿಸಿದ್ದ ಯುವ ಗಾಯಕರೊಬ್ಬರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನ ಖ್ಯಾತ ಗಾಯಕ ಡಾರ್ಲಿನ್ ಮೊರೈಸ್ ಸಾವನ್ನಪ್ಪಿರುವವರು. ಇದರಿಂದಾಗಿ ಅವರ ಅಭಿಮಾನಿಗಳ ಆಘಾತಕ್ಕೊಳಗಾಗಿದ್ದಾರೆ.

ಗಾಯಕ ಡಾರ್ಲಿನ್ ಮೊರೈಸ್ ಅವರಿಗೆ ಜೇಡ ಕಚ್ಚಿತ್ತು. ಈ ಕಾರಣದಿಂದ ಅವರು ಆವತ್ತೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದ್ರೆ ಮನೆಗೆ ಬಂದ ಮೇಲೆ ಅವರಿಗೆ ಆಯಾಸ ಹೆಚ್ಚಾಗುತ್ತಾ ಹೋಗಿತ್ತು. ದಿನದಿಂದ ದಿನಕ್ಕೆ ದೇಹದ ಬಣ್ಣ ಕೂಡಾ ಬದಲಾಗುತ್ತಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪುದ್ದಾರೆ. ಮೃತ ಗಾಯಕನಿಗೆ ಕೇವಲ 28 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

 

Share Post