International

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ದಂಡ: 50ಸಾವಿರ ದಂಡ ವಿಧಿಸಿದ ಎಲೆಕ್ಷನ್‌ ಕಮಿಷನ್

ಪಾಕಿಸ್ತಾನ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಆ ದೇಶದ ಚುನಾವಣಾ ಆಯೋಗ ದಂಡ ವಿಧಿಸಿದೆ. ಇತ್ತೀಚೆಗೆ ಸ್ವಾತ್ ನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 50,000 ರೂ. ದಂಡ ವಿಧಿಸಿದ್ದಾರೆ. ಖೈಬರ್ – ಪಖ್ತುಂಖ್ವಾದಲ್ಲಿ ಸ್ಥಳೀಯ ಆಡಳಿತ ಚುನಾವಣೆಯ ಪ್ರಚಾರದಲ್ಲಿ ತೊಡಗದಂತೆ,  ಸ್ವಾತ್‌ಗೆ ಭೇಟಿ ನೀಡುವುದು ಮತ್ತು ಅಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸದಂತೆ ಇಮ್ರಾನ್ ಖಾನ್‌ಗೆ ಎಲೆಕ್ಷನ್‌ ಕಮಿಷನ್‌ ಸೂಚನೆ ನೀಡಿತ್ತು.

ಚುನಾವಣಾ ಆಯೋಗದ ಸೂಚನೆಯನ್ನು ಉಲ್ಲಂಘಿಸಿ ಅಲ್ಲಿಗೆ ಭೇಟಿನೀಡಿ ರ್ಯಾಲಿ ನಡೆಸಿದ್ದಲ್ಲದೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣಾ ಆಯೋಗದ ಹೊಸ ನಿಯಮಾವಳಿ ಪ್ರಕಾರ.. ಚುನಾವಣೆ ನಡೆಯುವ ಜಿಲ್ಲೆಗಳಿಗೆ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡುವಂತಿಲ್ಲ. ಮಾರ್ಚ್ 31 ರಂದು ಖೈಬರ್ ಪಖ್ತುಂಖ್ವಾದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಇಮ್ರಾನ್ ಖಾನ್ ಸೇರಿ ಐವರಿಗೆ ದಂಡ ವಿಧಿಸಲಾಗಿದೆ. ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಖೈಬರ್ ಪಖ್ತುಂಖ್ವಾ ಸಿಎಂ ಮೊಹಮ್ಮದ್ ಖಾನ್, ಮುರಾದ್ ಸೈಯದ್, ಡಾ. ಅಂಜದ್ ಅಲಿ ಮತ್ತು ಮೊಹಿಬುಲ್ಲಾ ಅವರಿಗೆ ದಂಡ ವಿಧಿಸಲಾಗಿದೆ.

ಪಾಕಿಸ್ತಾನದ ಪ್ರಧಾನಿ ಮತ್ತು ಯೋಜನಾ ಸಚಿವ ಅಸದ್ ಒಮರ್ ಅವರ ವಿರುದ್ಧ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ನೀತಿ ಸಂಹಿತೆ ಜಾರಿಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ವಿಚಾರಣಾ ನ್ಯಾಯಾಲಯ ಸ್ಪಷ್ಟಪಡಿಸಿದೆ.

Share Post