Districts

ಟ್ರ್ಯಾಕ್ಟರ್‌ ಪಲ್ಟಿ: ಮೂಡಿಗೆರೆಯ ನವವಿವಾಹಿತ ದುರ್ಮರಣ

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವಕನೊಬ್ಬ ಟ್ರ್ಯಾಕ್ಟರ್‌ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಹಳೇ ಕೋಟೆ ಬಳಿ ನಡೆದಿದೆ. ಹಳೇ ಕೋಟೆ ಗ್ರಾಮದ ಹರೀಶ್‌ ಎಂಬಾತನೇ ಟ್ರ್ಯಾಕ್ಟರ್‌ ಕೆಳಗಿ ಸಿಲುಕಿ ಸಾವನ್ನಪ್ಪಿದ ಯುವಕ. ಹರೀಶ್‌ ಟ್ರ್ಯಾಕ್ಟರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ನಲವತ್ತೈದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಹರೀಶ್‌ ಇತ್ತೀಚೆಗಷ್ಟೇ ಟ್ರ್ಯಾಕ್ಟರ್‌ ಕೆಲಸ ಬಂದಿದ್ದರು. ಟ್ರ್ಯಾಕ್ಟರ್‌ನ್ನು ಇಳಿಜಾರಿನಲ್ಲಿ ನಿಲ್ಲಿಸಿಕೊಂಡಿದ್ದರು. ಈ ವೇಳೆ ಟ್ರ್ಯಾಕ್ಟರ್‌ ಉರುಳಿಬಿದ್ದಿದೆ. ಟ್ರ್ಯಾಕ್ಟರ್‌ ಪಲ್ಟಿಯಾಗಿದ್ದರಿಂದಾಗಿ ಅದರಲ್ಲಿ ಕುಳತಿದ್ದ ಹರೀಶ್‌, ಟ್ರ್ಯಾಕ್ಟರ್‌ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ.

Share Post