InternationalNational

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಹೊಸ ಮಾರ್ಗಸೂಚಿ ಬಿಡುಗಡೆ:ಹೋಂ ಕ್ವಾರಂಟೈನ್‌ ಹಿಂತೆಗೆತ

ದೆಹಲಿ: ವಿದೇಶದಿಂದ ಬರುವವರಿಗೆ ಏಳು ದಿನಗಳ ಕ್ವಾರಂಟೈನ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಓಮಿಕ್ರಾನ್ ರೂಪಾಂತರಿ ಕಾರಣದಿಂದಾಗಿ 7 ದಿನಗಳ ಕಾಲ ಹೋಂ ಕ್ವಾರಂಟೈನ್‌ ಆದೇಶ ನೀಡಿದ್ದ ಕೇಂದ್ರೆ ಅದನ್ನು ತೆಗೆದುಹಾಕಿ 14 ದಿನಗಳವರೆಗೆ ಸ್ವಯಂ-ಮೇಲ್ವಿಚಾರಣೆಗೆ ಶಿಫಾರಸು ಮಾಡಿದೆ. ಈ ನಿಯಮ ಸೋಮವಾರ ಅಂದರೆ ಫೆಬ್ರವರಿ 14 ರಿಂದ ಜಾರಿಗೆ ಬರಲಿವೆ.

ಹೊಸ ಮಾರ್ಗಸೂಚಿ ಪ್ರಕಾರ ವಿದೇಶದಿಂದ ಬರುವವರು ಆನ್‌ಲೈನ್‌ನಲ್ಲಿ ಸ್ವಯಂ ನಿಗಾ ಘೋಷಣೆ ಪತ್ರ ನೀಡಬೇಕು.ಇದು  ಏರ್ ಸುವಿಧಾ ವೆಬ್ ಪೋರ್ಟಲ್‌ನಲ್ಲಿ ಲಭ್ಯವಿದೆ. 14 ದಿನಗಳ ಪ್ರಯಾಣದ ಮಾಹಿತಿಯನ್ನು ಸಹ ದಾಖಲಿಸಬೇಕಾಗಿದೆ. ಪ್ರಯಾಣದ ದಿನಾಂಕಕ್ಕಿಂತ 72 ಗಂಟೆಗಳ ಮೊದಲು RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು.

ಕೊರೊನಾ ಲಸಿಕೆ ಎರಡು ಡೋಸ್‌ಗಳನ್ನು ತೆಗೆದುಕೊಂಡಿರುವ ಬಗ್ಗೆ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು. ಈ ಆಯ್ಕೆಯು ಪಟ್ಟಿ ಮಾಡಲಾದ 72 ದೇಶಗಳಲ್ಲಿನ ಪ್ರಯಾಣಿಕರಿಗೆ ಮಾತ್ರ ಅನ್ವಯ ಆಗಲಿದೆ. ಈ ಪಟ್ಟಿಯಲ್ಲಿ ಕೆನಡಾ, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆಲವು ಇತರ ಯುರೋಪಿಯನ್ ರಾಷ್ಟ್ರಗಳೂ ಸೇರಿವೆ.

ಯಾವುದೇ ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ.  ನೀವು ವಿಮಾನದಲ್ಲಿ ಇರುವವರೆಗೂ ಫೇಸ್ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವುದು ಕಡ್ಡಾಯವಾಗಿದೆ.

Share Post