CrimeInternational

ನ್ಯಾಯಾಂಗ ನಿಂದನೆ ಪ್ರಕರಣ; ಮದ್ಯದ ದೊರೆ ಮಲ್ಯಗೆ ಜೈಲು ಶಿಕ್ಷೆ

ನವದೆಹಲಿ; ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್‌​ ದಂಡಸಮೇತ ಶಿಕ್ಷೆ ವಿಧಿಸಿದೆ. ನಾಲ್ಕು ತಿಂಗಳ ಜೈಲು ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

   ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗುರುವ ಮಲ್ಯರನ್ನು ಗಡಿಪಾರು ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ನಡುವೆಯೇ ಮಲ್ಯಗೆ ಭಾರತದ ಸುಪ್ರೀಂ ಕೋರ್ಟ್‌ ಶಾಕ್‌ ನೀಡಿದೆ. ನ್ಯಾಯಾಂಗ  ನಿಂದನೆ ಪ್ರಕರಣದಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಅವರು ಗಡಿಪಾರಿಗೆ ಭಾರತಕ್ಕೆ ಬಂದರೆ ಮಲ್ಯ ಈ ಶಿಕ್ಷೆ ಅನುಭವಿಸಬೇಕಾಗುತ್ತದೆ.

ತಮ್ಮ ಮಕ್ಕಳ ಖಾತೆಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ್ದ ಆರೋಪ ಮಲ್ಯ ಮೇಲಿತ್ತು. ಇದರ ವಿವರ ಬಹಿರಂಗಪಡಿಸಲು ಹಾಗೂ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೀಡಲಾಗಿದ್ದ ಸಮನ್ಸ್‌ಗಳನ್ನು ಅವರು ನಿರ್ಲಕ್ಷ್ಯ ಮಾಡಿದ್ದರು. ಈ ಗಂಭೀರ ಪ್ರಕರಣದಲ್ಲಿ 2017ರಲ್ಲಿ ಮಲ್ಯ ಅವರು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿತ್ತು.

Share Post