BengaluruPolitics

ದೇವೇಗೌಡರ ಮನೆಯಲ್ಲಿ‌ ವಿ.ಸೋಮಣ್ಣ ಜೊತೆ ಸಂಧಾನ

ಬೆಂಗಳೂರು; ಮಾಜಿ ಸಚಿವ ವಿ.ಸೋಮಣ್ಣ ಅವರು ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಸೋತಿದ್ದರು. ಅನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಆ ಸ್ಥಾನವೂ ಸಿಕ್ಕಿಲ್ಲ. ಹೀಗಾಗಿ ಮುನಿಸಿಕೊಂಡಿದ್ದ ಅವರು ಕಾಂಗ್ರೆಸ್ ಸೇರುವ ತವಕದಲ್ಲಿದ್ದರು. ಬಿಜೆಪಿ ಹೈಕಮಾಂಡ್ ನಾಯಕರು ಅವರನ್ನು ಸಮಾಧಾನ ಮಾಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಮಾಜಿ ಪ್ರಧಾನಿ ದೇವೇಗೌಡರು, ಸೋಮಣ್ಣ ಅವರನ್ನು ಮನೆಗೆ ಕರೆಸಿಕೊಂಡು ಸಮಾಧಾನ ಮಾಡಿದ್ದಾರೆ.

 

ನಿನ್ನೆ ರಾತ್ರಿ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದರು. ಈ ವೇಳೆ ಸೋಮಣ್ಣ ಅವರು, ಬಿಜೆಪಿ‌‌ ನಾಯಕರ ಬಗ್ಗೆ ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ. ನಾನು ಬೇಡ ಎಂದರೂ ಎರಡು ಕಡೆ ಟಿಕೆಟ್ ನೀಡಿ ಸೋಲಿಸಿದರು ಎಂದು ಗೌಡರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ.

 

ಈ ವೇಳೆ ದೇವೇಗೌಡರು ಸೋಮಣ್ಣರನ್ನು ಸಮಾಧಾನ ಮಾಡಿದ್ದು, ನಾನೂ ಕೂಡಾ ಸೋತಿದ್ದೇನೆ. ನೀನು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡು. ಲಿಂಗಾಯತ, ಒಕ್ಕಲಿಗ ಕಾಂಬಿನೇಷನ್ ವರ್ಕೌಟ್ ಆಗುತ್ತೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

Share Post