CrimeInternational

ಎರಡು ಯುದ್ಧ ವಿಮಾನಗಳ ಡಿಕ್ಕಿ; ಮೂವರ ದುರ್ಮರಣ

ಟೆಕ್ಸಾಸ್; 2ನೇ ಮಹಾಯುದ್ಧದ ಸ್ಮರಣಾರ್ಥಕವಾಗಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಆಗಿನ ಕಾಲದ ಎರಡು ವಿಮಾನಗಳ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ.

ಅಮೆರಿಕದ ಟೆಕ್ಸಾಸ್ ನಗರದ ಬಳಿ ಈ ದುರ್ಘಟನೆ ನಡೆದಿದೆ. ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್‌ಕೋಬ್ರಾ ಎಂಬ ವಿಮಾನಗಳು ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದವು.

ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ಏರ್‌ಶೋನಲ್ಲಿ ಶನಿವಾರ ಏರ್ ಶೋ ಆಯೋಜಿಸಲಾಗಿತ್ತು. ಈ ವೇಳೆ ವಿಮಾನಗಳ ವಿಂಗ್ಸ್ ತಗುಲಿ ಅಪಘಾತವಾಗಿದೆ.

Share Post