ದುಬೈ ದೊರೆಯ ದುಬಾರಿ ವಿಚ್ಚೇದನ
ದುಬೈ: ದುಬೈ ದೊರೆಗೆ ಲಂಡನ್ ನ್ಯಾಯಾಲಯ ಬಹು ದೊಡ್ಡಮೊತ್ತವನ್ನೇ ದಂಡ ವಿಧಿಸಿದೆ. ಇರಲಾರದೆ ಇರುವ ಬಿಟ್ಕೊಳೊದು ಅಂತಾರಲ್ಲ ಹಂಗಾಗಿದೆ ದುಬೈ ಶೇಕ್‌ನ ಪರಿಸ್ಥಿತಿ. ತನ್ನ ಆರನೇ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾರೆ. ಅದಕ್ಕೆ ಜೀವನಾಂಶವಾಗಿ 5,555ಕೋಟಿ ನೀಡುವಂತೆ ಲಂಡನ್ ನ್ಯಾಯಾಲಯ ಸೂಚನೆ ನೀಡಿದೆ. ಅದು ಮೂರು ತಿಂಗಳ ಒಳಗಾಗಿ ಹಣ ಪಾವತಿ ಮಾಡುವಂತೆ ಆದೇಶ ಹೊರಡಿಸಿದೆ.
ಅರಬ್ ರಾಷ್ಟ್ರಗಳ ದೊರೆಗಳ ಜೀವನ ವಿಲಾಸಿ ಆಗಿದ್ರು ಕೂಡ ಕೆಲವೊಮ್ಮೆ ಹೀಗಾಗುತ್ತದೆ. ಯಾಕಂದ್ರೆ 72ವರ್ಷ ವಯಸ್ಸಿನ ದುಬೈ ಉಪಾಧ್ಯಕ್ಷ ಮತ್ತು ಪ್ರಧಾನಿಯಾದ ಶೇಕ್ ಮಹಮ್ಮದ್ ಬಿನ್ ರಶೀದ್ ಅಲ್ ಮುಕ್ತುಮ್ ಒಬ್ಬರಲ್ಲ..ಇಬ್ಬರಲ್ಲ ಆರನೇ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾನೆ. ಇದನ್ನು ನ್ಯಾಯಾಲಯದ ಮೂಲಕ ಪಡೆಯಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ಅಷ್ಟಕ್ಕೂ ವಿಚ್ಛೆದನಕ್ಕೆ ಕಾರಣ ಏನಪ್ಪ ಅಂದ್ರೆ.. ರಾಜಕುಮಾರಿ ಹಯಾ ಈ ದುಬೈ ಶೇಕ್‌ನ ಬಾಡಿಗಾರ್ಡ್ ಜೊತೆ ಸಂಬಂಧ ಹೊಂದಿದ್ದಾರಂತೆ. ಇದು ಗೊತ್ತಾದ ಬಳಿಕ ಕೆಂಡಾಮಂಡಲರಾಗಿದ್ದಾರೆ. ಜೀವ ಭಯದಿಂದ ಹಯಾ ಬ್ರಿಟನ್‌ಗೆ ಕಾಲ್ಕಿತ್ತರಂತೆ. ನಂತರ ವಿಚ್ಛೇದನಕ್ಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಯಾ ಮತ್ತು ಇಬ್ಬರು ಮಕ್ಕಳ ಜೀವನಾಂಶಕ್ಕಾಗಿ ಲಂಡನ್ ನ್ಯಾಯಾಲಯ ದುಬೈ ಶೇಕ್‌ಗೆ 734 ಅಮೆರಿಕನ್ ಡಾಲರ್ ಅಂದ್ರೆ ಬರೋಬ್ಬರಿ (5,555)ಕೋಟಿ ರೂಪಾಯಿಗಳನ್ನು ನೀಡುವಂತೆ ಗಡುವು ನೀಡಿದೆ.