International

ಚೀನಾದಲ್ಲಿ ಕೊರೊನಾ ಸಂಖ್ಯೆ ಗಣನೀಯ ಇಳಿಕೆ

ಚೀನಾ: ಜಗತ್ತನ್ನಾಳಿದ ಕೊರೊನಾ ತವರು ಮನೆ ಎಂದೇ ಖ್ಯಾತಿ ಪಡೆದಿರುವ ಚೀನಾದಲ್ಲಿ ಮಾತ್ರ ಕೊರೊನಾ ಸೋಂಕು ಕಡಿಮೆ ಆಗಿದೆ ಎಂಬ ಸುದ್ದಿ ಹರಿದಾಡ್ತಿದೆ. ಪ್ರಪಂಚವನ್ನು ಗಡಗಡ ನಡುವಗಿಸುವಂತಹ ಮಹಾಮಾರಿಯನ್ನು ಹುಟ್ಟುಹಾಕಿದ ಚೀನಾದಲ್ಲಿ ಇಂತಹ ಪರಿಸ್ಥಿತಿಗೆ ಕಾರಣ ಏನು ಎಂದು ತಿಳಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಲಕ್ಷಗಟ್ಟಲೆ ಕೇಸ್‌ ದಾಖಲಾಗುತ್ತಿದ್ದ ನಗರದಲ್ಲಿ ಏಕಾಏಕಿ ಇಳಿಮುಖವಾಗಿದೆಯಂತೆ. ಅದಕ್ಕೆ ಮುಖ್ಯ ಕಾರಣ ಅವರು ತೆಗೆದುಕೊಂಡಂತಹ ತೀರ್ಮಾನ ಎನ್ನಲಾಗಿದೆ. ಚೀನಾದ ಗ್ಜಿಯನ್‌ ನಗರದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಗಗನಕ್ಕೇರಿತ್ತು ಈ ವೇಳೆ ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ನಗರಾದ್ಯಂತೆ ಅತ್ಯಂತ ಕಠಿಣವಾದ ಲಾಕ್‌ಡೌನ್‌ ಜಾರಿಮಾಡಿದೆ. ಒಂದು ಕೋಟಿ ಮೂವತ್ತು ಲಕ್ಷ ಜನಸಂಖ್ಯೆಯಿರುವ ನಗರದಲ್ಲಿ ಒಂದೊಂದು ಕೇಸ್ ಅನ್ನು ಪರಿಗಣನೆ ಮಾಡಿ ಪ್ರೈಮರಿ ಕಾಂಟಾಕ್ಟ್‌ನಿಂದ ಹಿಡಿದು ಸೋಂಕಿಗೆ ಒಳಪಟ್ಟ ಎಲ್ಲರ ವಿಳಾಸ ಜಾಲಾಡಿ ಕ್ವಾರಂಟೈನ್‌ ಮಾಡಿದ್ರು. ಇದ್ದಕ್ಕಿದ್ದಂತೆ ಎರಡನೇ ವಾರದಲ್ಲಿ ಗರಿಷ್ಟ 1800 ಕೇಸ್‌ ನಮೂದಾಗುತ್ತಿದ್ದ ಜಾಗದಲ್ಲಿ ಕೇವಲ 35 ಕೇಸ್‌ಗಳಿಗೆ ಇಳಿದಿದೆಯಂತೆ. ಇದಕ್ಕೆ ಮುಖ್ಯ ಕಾರಣ ಕಠಿಣ ಲಾಕ್‌ಡೌನ್‌ ಜಾರಿ ಮಾಡಿದ್ದರಿಂದ ಸಾಧ್ಯವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Share Post