ಹೆದ್ದಾರಿ ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ
ಇಸ್ಲಾಮಾಬಾದ್ : ಕೆಲವು ದಿನಗಳ ಮುಂಚೆ ನಾವು ಆರ್ಥಿಕವಾಗಿ ಭಾರತಕ್ಕಿಂತ ಪ್ರಬಲವಾಗಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಸಾಕಷ್ಟು ಚರ್ಚೆಗೂ ಈ ಹೇಳಿಕೆ ಕಾರಣವಾಗಿತ್ತು. ಈಗ ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದಿರುವ ಪಾಕಿಸ್ತಾನ ಆರ್ಥಿಕವಾಗಿ ಯಾವ ಸ್ಥಿತಿ ತಲುಪಿದೆ ಎಂಬುದು ಎಲ್ಲರಿಗೂ ತಿಳಿಯುತ್ತಿದೆ.
ಪಾಕಿಸ್ತಾನವು 1 ಶತಕೋಟಿ ಡಾಲರ್ ಅನ್ನು 7ವರ್ಷದ ಅವಧಿಗೆ ಇಸ್ಲಾಮಿಕ್ ಬಾಂಡ್ ಮೂಲಕ ಪಡೆದಿದೆ. ಈ ಮೊತ್ತಕ್ಕೆ ಶೇ. 7.95 ಬಡ್ಡಿದರ ಅಲ್ಲದೇ, ಲಾಹೋರ್ – ಇಸ್ಲಾಮಾಬಾದ್ ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡಮಾನವಿರಿಸಿದೆ.
ಇಸ್ಲಾಮಿಕ್ ಬಾಂಡ್‌ನಡಿ ಪಡೆದ ಸಾಲಕ್ಕೆ ಇಷ್ಟು ಬಡ್ಡಿ ಪಾವತಿ ಮಾಡುತ್ತಿರುವುದು ಪಾಕಿಸ್ತಾನದ ಇತಿಹಾಸದಲ್ಲೇ ಇದು ಮೊದಲು ಎಂದು ಮಾಧ್ಯಮಗಳು ವರದಿ ಮಾಡಿದೆ.
ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17ಬಿಲಿಯನ್ ಡಾಲರ್‌ನಿಂದ ಕುಸಿತವಾಗಿದೆ. ಹೀಗಾಗಿ ಇದನ್ನು ಇನ್ನಷ್ಟು ಕುಸಿತ ಕಾಣದಂತೆ ತಡೆಯಲು ಪಾಕಿಸ್ತಾನ ಸಾಲದ ಮೊರೆ ಹೋಗಿದೆ.