200ಕ್ಕೂ ಹೆಚ್ಚು ಏರ್ ಇಂಡಿಯಾ ಸಿಬ್ಬಂದಿ ವಜಾ
ನವದೆಹಲಿ; ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದೆ.. ಅನಾರೋಗ್ಯದ ನೆಪವೊಡ್ಡಿ ಏರ್ ಇಂಡಿಯಾ ಸಿಬ್ಬಂದಿ ಸಾಮೂಹಿಕ ರಜೆ ಹಾಕಿದ್ದರು.. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಂಸ್ಥೆ 200 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾ ಮಾಡಿದೆ..
200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯದ ನೆಪ ಹೇಳಿ ರಜೆ ಹಾಕಿದ್ದರು.. ಇದರಿಂದ 70ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿತ್ತು.. ಹೀಗಾಗಿ ಸಂಸ್ಥೆ ಇದನ್ನು ಗಂಭಿರವಾಗಿ ತೆಗೆದುಕೊಂದು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ.. ಈಗಾಗಲೇ 35 ನೌಕರರಿಗೆ ವಜಾ ಪತ್ರ ಕಳುಹಿಸಲಾಗಿದೆ..
ಸಿಬ್ಬಂದಿಗಳಿಗೆ ಕಳುಹಿಸಿದ ವಜಾ ಪತ್ರದಲ್ಲಿ, ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಕೆಲಸ ಮಾಡುವ ಮೊದಲು ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಉಲ್ಲೇಖಿಸಿದೆ. ಅಲ್ಲದೇ, ‘ನಿಮ್ಮ ಕಾರ್ಯವು ಸಾರ್ವಜನಿಕ ಹಿತಾಸಕ್ತಿಗಳಿಗೆ ಹಾನಿಯುಂಟುಮಾಡುವುದು ಮಾತ್ರವಲ್ಲದೆ, ಕಂಪನಿಗೆ ಮುಜುಗರ, ಗಂಭೀರ ಅಪಖ್ಯಾತಿ ಮತ್ತು ಗಂಭೀರ ವಿತ್ತೀಯ ನಷ್ಟವನ್ನು ಉಂಟುಮಾಡಿದೆ’ ಎಂದು ಹೇಳಿದೆ.