HealthInternational

ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ; ಕೋಮಾಗೆ ಜಾರಿದ ಮಗು!

ವೃದ್ದೆಯೊಬ್ಬಳು ತನ್ನ ನಾಲ್ಕು ತಿಂಗಳ ಮೊಮ್ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿ ಕುಡಿಸಿದ್ದಾಳೆ.. ಇದರಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋಮಾಗೆ ಜಾರಿದೆ.. ಇಟಲಿಯಲ್ಲಿ ಇಂತಹ ಆಘಾತಕಾರಿ ಘಟನೆ ನಡೆದಿದೆ..

  ಮನೆಯಲ್ಲಿ ಅಜ್ಜಿ ಹಾಗೂ ನಾಲ್ಕು ತಿಂಗಳ ಶಿಶು ಅಷ್ಟೇ ಇತ್ತು.. ಇದೇ ವೇಳೆ ಮಗು ಅಳುತ್ತಿದ್ದುದನ್ನು ನೋಡಿದ ಅಜ್ಜಿ, ಮಗುವಿಗೆ ಹಾಲು ತರಲು ಹೋಗಿದ್ದಾಳೆ.. ಈಗಾಗಲೇ ಬಳಸಿದ್ದ ಹಾಲಿನಲ್ಲಿ ಸ್ವಲ್ಪ ಹಾಲು ಮಿಕ್ಕಿದ್ದು ಅದಕ್ಕೆ ಮತ್ತಷ್ಟು ಹಾಲು ಸೇರಿಸಲು ಹೋಗಿದ್ದಾಳೆ.. ಈ ವೇಳೆ ಹಾಲಿನ ಕ್ಯಾನ್ ಬದಲಾಗಿ, ಆಲ್ಕೋಹಾಲ್ ಇದ್ದ ಕ್ಯಾನ್ ನಿಂದ ಹಾಲಿಗೆ ಆಲ್ಕೋಹಾಲ್ ಬೆರೆಸಿದ್ದಾಳೆ.. ಅಜ್ಜಿ ತಿಳಿಯದೇ ಹೀಗೆ ಮಾಡಿದ್ದು, ಇದನ್ನು ಅರ್ಧ ಕುಡಿಯುವಷ್ಟರಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ..

  ಅಜ್ಜಿ ಅನುಮಾನಗೊಂಡು ಹಾಲಿನ‌ ವಾಸನೆ ನೋಡಿದಾಗ ಅದರಲ್ಲಿ ಆಲ್ಕೋಹಾಲ್ ಮಿಕ್ಸ್ ಆಗಿರುವುದು ಗೊತ್ತಾಗಿದೆ.. ಕೂಡಲೇ ಮಗುವನ್ನ ಆಸ್ಪತ್ರೆಗೆ ಸೇರಿಸಲಾಗಿದೆ.. ಸದ್ಯ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ..

 

Share Post