International

ಅಂಡಮಾನ್‌ ದ್ವೀಪದಲ್ಲಿ ಭೂಕಂಪನ; ಮಧ್ಯರಾತ್ರಿ ಬೆಚ್ಚಿಬೀಳಿಸಿದ ಘಟನೆ

ಪೋರ್ಟ್ ಬ್ಲೇರ್; ನಿನ್ನೆಯಷ್ಟೇ ನೇಪಾಳದಲ್ಲಿ ಭೂಕಂಪನವಾಗಿತ್ತು. ಇದೀಗ ಅಂಡಮಾನ್‌-ನಿಕೋಬಾರ್‌ ದ್ವೀಪದಲ್ಲಿ ಭೂಮಿ ಕಂಪಿಸಿದೆ. ಕಳೆದ ಮಧ್ಯರಾತ್ರಿ ಅಂಡಮಾನ್‌ -ನಿಕೋಬಾರ್‌ ದ್ವೀಪದ ರಾಜಧಾನಿ ಫೋರ್ಟ್‌ಬ್ಲೇರ್‌ ನಿಂದ 250 ಕಿಲೋ ಮೀಟರ್‌ ದೂರದಲ್ಲಿ ಭೂಕಂಪನ ಆಗಿದೆ. ಇದನ್ನು ರಾಷ್ಟ್ರೀಯ ಭೂಕಂಪನ ಕೇಂದ್ರ ಕೂಡಾ ದೃಢೀಕರಿಸಿದೆ.

ಬುಧವಾರ ಮಧ್ಯರಾತ್ರಿ 2.29ರ ಸುಮಾರಿಗೆ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ ಇನ್ನೂ ಮಾಹಿತಿ ಸಿಕ್ಕಿಲ್ಲ. 10 ಕಿಲೋ ಮೀಟರ್‌ ಆಳದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.

Share Post