Health

ಡಯೆಟ್‌ ಹೆಸರಲ್ಲಿ ಚಪಾತಿ ಹೆಚ್ಚಾಗಿ ತಿಂದ್ರೆ ಆಪತ್ತು ಪಕ್ಕಾ..!

ಚಪಾತಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಸಣ್ಣ ಮಕ್ಕಳಿಂದ ಹಿಡಿದು ಹಿರಯರವರೆಗೂ ಚಪಾತಿ ಅಂದ್ರೆ ಬಾಯಲ್ಲಿ ನೀರೂರಿಸಿ ತಿನ್ನುವವರಿದ್ದಾರೆ. ಆದ್ರೆ ಜೋಕೆ ಇದು ಒಳ್ಳೆಯದಲ್ಲ ಅಂತಾರೆ ಆರೋಗ್ಯ ತಜ್ಞರು. ಸಾಮಾನ್ಯವಾಗಿ ಚಪಾತಿ ಶುಗರ್‌ ಲೆವೆಲ್‌ ಕಡಿಮೆ ಮಾಡುತ್ತೆ ಜೊತೆಗೆ ಬೊಜ್ಜು ಕರಗಿಸಲು ಸಹಾಯಕವಾಗುತ್ತೆ ಅಂತ ತಿಂತಾರೆ ಆದ್ರೆ ಅದು ಸುಳ್ಳು ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.

ಯಾಕಂದ್ರೆ ಮೊದಲು ಗೋಧಿ ಹಿಟ್ಟು ಅಂದ್ರೆ ಒಟ್ಟಿನ ಸಮೇತ ರಾಗಿ ಕಲ್ಲಿನಲ್ಲಿ ಬೀಸಿ ಚಪಾತಿ ಮಾಡ್ತಿದ್ದರು ಇದು ಆರೋಗ್ಯಕರವಾಗಿರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್‌ನಲ್ಲಿ ದೊರೆಯುವ ಗೋಧಿ ಹಿಟ್ಟಿನಲ್ಲಿ ಸ್ವಲ್ಪವೂ ಫೈಬರ್‌ ಅಂಶ ಇರುವುದಿಲ್ಲವಂತೆ ಅಂತಹ ಚಪಾತಿ ತಿಂದರೂ ಪ್ರಯೋಜನವಿಲ್ಲ ಅಂತಾರೆ ತಜ್ಞರು. ಪ್ಯೂರಿಟಿ ಹಿಂದೆ ಬಿದ್ದಿರುವ ಯುವಜನರಿಗೆ ಎಲ್ಲಾ ಹಿಟ್ಟು, ಕಾಳುಗಳನ್ನು ಪಾಲಿಶ್‌ ಮಾಡಲಾಗುತ್ತದೆ. ಅದರಲ್ಲಿ ಫೈಬರ್‌ಗಿಂತ ಹೆಚ್ಚಾಗಿ ಗ್ಲೂಟೆನ್‌ ಅಂಶ ಇರುತ್ತಂತೆ. ಅದನ್ನು ತಿಂದ್ರೆ ʻಸಿಲಿಯಾಕ್‌ʼ ಎಂಬ ರೋಗ ಬರುವ ಸಾಧ್ಯತೆ ಹೆಚ್ಚಿದೆ.

ಕ್ರಮೇಣ ಪಾಲಿಷ್‌ ಮಾಡಿದ ಗೋಧಿ ಹಿಟ್ಟಿನ ಚಪಾತಿ ತಿನ್ನುವುದರಿಂದ ಹೊಟ್ಟೆನೋವು, ಗ್ಯಾಸ್‌ ಸಮಸ್ಯೆ, ಸಣ್ಣ ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದೆಯಂತೆ. ಹಾಗಾಗಿ ಮಾರ್ಕೆಟ್‌ನಲ್ಲಿ ಸಿಗುವ ಪಾಲಿಷ್‌ ಗೋಧಿ ಹಿಟ್ಟಿನ ಚಪಾತಿ ಬದಲಿಗೆ, ಒಟ್ಟಿನ ಸಮೇತ ಪುಡಿ ಗೋಧಿ ಹಿಟ್ಟಿನ ಚಪಾತಿಯನ್ನು ಸೇವಿಸುವಂತೆ ಆಹಾರ ತಜ್ಞರು ಸೂಚಿಸಿದ್ದಾರೆ.

Share Post