ಎಂಬಿಬಿಎಸ್ ಫೇಲಾದ ವಿದ್ಯಾರ್ಥಿಯಿಂದ ಚಿಕಿತ್ಸೆ; ಹೃದ್ರೋಗಿ ಸಾವು!
ಕೇರಳ; ಎಂಬಿಬಿಎಸ್‌ನಲ್ಲಿ ಫೇಲಾಗಿರುವ ಯುವಕನೊಬ್ಬ ಹೃದ್ರೋಗಿಗೆ ಚಿಕಿತ್ಸೆ ನೀಡಿದ್ದು, ರೋಗಿ ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕ್ಕೋಡಿನಲ್ಲಿ ನಡೆದಿದೆ.. ಅಬು ಅಬ್ರಹಾಂ ಲ್ಯೂಕ್ ಎಂಬಾತ ಎರಡನೇ ವರ್ಷದ ಎಂಬಿಬಿಎಸ್‌ನ್ನು ಕೂಡಾ ಇನ್ನೂ ಪೂರ್ತಿ ಮಾಡಿಲ್ಲ.. ಆದ್ರೆ 60 ವರ್ಷದ ಹೃದ್ರೋಗಿ ವಿನೋದ್ ಕುಮಾರ್ ಎಂಬುವವರಿಗೆ ಚಿಕಿತ್ಸೆ ನೀಡಿದ್ದಾನೆ.. ಇದರಿಂದ ವಿನೋದ್ ಕುಮಾರ್ ಸಾವನ್ನಪ್ಪಿದ್ದಾರೆ..
ಕೋಝಿಕ್ಕೋಡಿನ ಖಾಸಗಿ ಆಸ್ಪತ್ರೆಗೆ ವಿನೋದ್ ಕುಮಾರ್ ಚಿಕಿತ್ಸೆಗೆಂದು ಹೋಗಿದ್ದರು.. ಈ ವೇಳೆ ಅಬು ಅಬ್ರಹಾಂ ಲ್ಯೂಕ್ ಆತನ ಎಂಬಿಬಿಎಸ್ ಪೂರ್ತಿ ಮಾಡದೇ ಇದ್ದರೂ ಕೂಡಾ ಚಿಕಿತ್ಸೆ ನೀಡಿದ್ದಾನೆ.. ಈ ಕಾರಣದಿಂದ ವಿನೋದ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..
ವಿನೋದ್ ಕುಮಾರ್ ಅವರ ಮಗನ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.. ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ..