ಕಾಡಿನ ಮಧ್ಯೆ ನಿಂತು ವಿಕಾರವಾಗಿ ಕಿರುಚಾಡ್ತಾರೆ..!; ಈ ವಿಚಿತ್ರ ಪಾರ್ಟಿಗೆ 6 ಲಕ್ಷ ರೂ. ಕೊಡಬೇಕಂತೆ..!
ಕೋಪ ಮನುಷ್ಯ ಸೇರಿ ಎಲ್ಲಾ ಪ್ರಾಣಿಗಳಲ್ಲಿ ಕಾಮನ್… ಮನುಷ್ಯನ ದುರ್ಗುಣಗಳಲ್ಲಿ ಈ ಕೋಪ ಕೂಡಾ ಒಂದು.. ಈ ಕೋಪ ನಾನಾ ಕಾರಣಗಳಿಗಾಗಿ ಬರುತ್ತದೆ.. ಕೆಲವರು ಮುಂಗೋಪಿಗಳಿರುತ್ತಾರೆ… ಸಣ್ಣ ಪುಟ್ಟ ವಿಷಯಕ್ಕೂ ಕೋಪ ವ್ಯಕ್ತಪಡಿಸುತ್ತಿರುತ್ತಾರೆ.. ಸಾಮಾನ್ಯವಾಗಿ ಮನುಷ್ಯನಿಗೆ ಇಷ್ಟವಿಲ್ಲದ ಮಾತುಗಳನ್ನು ಕೇಳಿದರೆ, ಯಾರಾದರೂ ಅನಗತ್ಯವಾಗಿ ಟೀಕಿಸಿದರೆ ಅಥವಾ ವಿರೋಧಿಸಿದರೆ ಕೋಪ ಬರುತ್ತದೆ.. ಎಂತಹ ಸೌಮ್ಯ ಸ್ವಭಾವದವನಾದರೂ ಒಮ್ಮೊಮ್ಮೆ ಕೋಪ ನೆತ್ತಿಗೇರುತ್ತೆ.. ಏಕೆಂದರೆ ಕೋಪ ಅನ್ನೋದು ಮಾನವನ ಸಹಜ ಗುಣ..
ಆದ್ರೆ ಅತಿಯಾದ ಕೋಪ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೋಪವು ಎಲ್ಲ ರೀತಿಯಲ್ಲೂ ಜನರನ್ನು ಹಾಳು ಮಾಡುತ್ತದೆ.. ಏಕೆಂದರೆ ಕೋಪದಲ್ಲಿ ಏನು ಮಾಡುತ್ತಿದ್ದೇವೆ ಅನ್ನೋ ಅರಿವೂ ಮನುಷ್ಯನಿಗೆ ಇರೋದಿಲ್ಲ.. ಯಾವುದು ಸರಿ, ಯಾವುದು ತಪ್ಪು ಅನ್ನೋ ವಿವೇಚನೆಯೂ ಇಲ್ಲದೆ ಮನುಷ್ಯ ವರ್ತಿಸುತ್ತಿರುತ್ತಾನೆ.. ಅದಕ್ಕಾಗಿಯೇ ಜನರು ಕೋಪವನ್ನು ನಿಯಂತ್ರಿಸಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿರುತ್ತಾರೆ.. ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಯೋಗಾ, ಧ್ಯಾನದ ಮೊರೆ ಹೋಗುತ್ತಾರೆ.. ಆದ್ರೆ ಅಮೆರಿಕ ಹಾಗೂ ಅನೇಕ ಯೂರೋಪಿಯನ್ ದೇಶದಲ್ಲಿ ಕೋಪ ನಿಯಂತ್ರಣಕ್ಕೆ ಮಹಿಳೆಯರು ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.. ಅದಕ್ಕೆ ರೇಜ್ ರಿಚುಯಲ್ಸ್ ಎಂದು ಹೆಸರಿಟ್ಟಿದ್ದಾರೆ..
ಕೋಪ ನಿಯಂತ್ರಣಕ್ಕೆ ಕಾಡಿನ ಮಧ್ಯದಲ್ಲಿ ಪಾರ್ಟಿಗಳನ್ನು ಆಯೋಜಿಸುವುದು ಟ್ರೆಂಡ್ ಆಗಿದೆ. ಇದಲ್ಲದೆ, ಮಹಿಳೆಯರು ತಮ್ಮ ಕೋಪವು ಕಡಿಮೆಯಾಗುವವರೆಗೂ ಈ ಕಾಡುಗಳಲ್ಲಿ ಜೋರಾಗಿ ಕಿರುಚುತ್ತಾರೆ. ಇದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಹಲವು ಮಹಿಳೆಯರು ಕಾಡಿಗೆ ಹೋಗಿ ಅಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಿಟ್ಟು ಕಡಿಮೆಯಾಗುವವರೆಗೂ ಕಾಡಿನ ಮಧ್ಯೆ ವಿಧ್ವಂಸಕ ಕೃತ್ಯ ಎಸಗುತ್ತಲೇ ಇರುತ್ತಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಮಹಿಳೆಯರು ಈ ಪಾರ್ಟಿಗಳಿಗೆ ಹೋಗುತ್ತಾರೆ, ರೇಜ್ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಇದಕ್ಕೆ ಒಬ್ಬೊಬ್ಬರು 5 ರಿಂದ 6 ಲಕ್ಷ ರೂಪಾಯಿ ಖರ್ಚು ಮಾಡುತ್ತಾರಂತೆ!!.
ಪ್ರಸ್ತುತ, ಮಿಯಾ ಮ್ಯಾಜಿಕ್ ಎಂದು ಕರೆಯಲ್ಪಡುವ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಅಮೆರಿಕದಲ್ಲಿ ‘ರೇಜ್ ರಿಚುಯಲ್ಸ್’ ನಡೆಸುತ್ತಿದ್ದಾರೆ. ಇದರಲ್ಲಿ ಹಲವು ಮಹಿಳೆಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮಿಯಾ ಮ್ಯಾಜಿಕ್ ಅನ್ನು ಮಿಯಾ ಬಂಡುಚಿ ಎಂದೂ ಕರೆಯುತ್ತಾರೆ.
ಈ ವಿಚಿತ್ರ ಆಚರಣೆ ಫ್ರಾನ್ಸ್ ನಲ್ಲಿ ಕೂಡಾ ಆಯೋಜಿಸಲಾಗಿದೆ.. ಕಳೆದ ಕೆಲವು ವರ್ಷಗಳಿಂದ ಇಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ಮಿಯಾ ಹೇಳಿದ್ದಾರೆ. ಅವರು ಮುಂದಿನ ಆಗಸ್ಟ್‌ನಲ್ಲಿ ಫ್ರಾನ್ಸ್‌ನಲ್ಲಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಇದರ ಬೆಲೆ $6,500 ಮತ್ತು $8,000. ಅಂದತೆ ಅಂದಾಜು ಆರು ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ..