ಕಿದ್ವಾಯಿ ಆಸ್ಪತ್ರೆಯಲ್ಲಿ ಹಾಳಾದ MRI ಸ್ಲ್ಯಾನಿಂಗ್ ಮಷಿನ್; ರೋಗಿಗಳ ಪರದಾಟ!
ಬೆಂಗಳೂರು; ಬೆಂಗಳೂರಿನ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಕಿದ್ವಾಯಿಯಲ್ಲಿ MRI ಮಷಿನ್ ಹಾಳಾಗಿದೆ, ಇದರಿಂದಾಗಿ ರೋಗಿಗಳು ನಿತ್ಯ ಪರದಾಡುತ್ತಿದ್ದಾರೆ. MRI ಮಾಡಿಸಲು ಖಾಸಗಿ ಲ್ಯಾಬ್ಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಇಲ್ಲಿ MRI ಮಷಿನ್ ಕೆಟ್ಟು ನಿಂತು 15 ದಿನ ಕಳೆದಿದೆ. ಆದರೂ ಕೂಡಾ ಇನ್ನೂ ಅದನ್ನು ಸರಿಪಡಿಸಿಲ್ಲ. ಹೊರಗಡೆ MRI ಮಾಡಿಸಬೇಕು ಅಂದ್ರೆ 10 ಸಾವಿರ ರೂಪಾಯಿ ಬೇಕು. ಆದ್ರೆ, ಇಲ್ಲಿಗೆ ಬರುವವರು ಬಡ ರೋಗಿಗಳು. ಸರ್ಕಾರಿ ಆಸ್ಪತ್ರೆ ಆಗಿರುವುದರಿಂದ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಇಲ್ಲಿಗೆ ಬರುತ್ತಾರೆ. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ಸಾವಿರಾರು ರೋಗಿಗಳ ಪರದಾಡಬೇಕಾದ ಪರಿಸ್ಥಿತಿ ಬಂದಿದೆ.
ಈ ಬಗ್ಗೆ ಆಸ್ಪತ್ರೆ ನಿರ್ದೇಶಕರು ಸ್ಪಷ್ಟನೆ ಕೊಟ್ಟಿದ್ದು, ಸರ್ಕಾರದ ಮುಂದೆ ಹೊಸ ಮಷಿನ್ಗೆ ಪ್ರಸ್ತಾವನೆ ಇಟ್ಟಿದ್ದೇವೆ. ಈಗ ಇರುವ ಮಷಿನ್ ಹಳೆಯದಾಗಿರುವುದರಿಂದ ಹೊಸ ಮಷಿನ್ ಬೇಕಾಗಿದೆ. ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.