ಆಪರೇಷನ್ ಅರ್ಧಕ್ಕೆ ನಿಲ್ಲಿಸಿ ಮಸಾಲೆ ದೋಸೆ ತಿನ್ನಲು ಹೋದ ವೈದ್ಯ!
ರೋಗಿಯೊಬ್ಬರಿಗೆ ಸರ್ಜರಿ ಶುರು ಮಾಡಿದ್ದ ವೈದ್ಯನೊಬ್ಬ ಹಸಿವಾಗುತ್ತಿದೆ ಎಂದು ಆಪರೇಷನ್ ಅರ್ಧಕ್ಕೇ ನಿಲ್ಲಿಸಿ, ತಿಂಡಿ ತಿಂದು ಬರುತ್ತೇನೆ ಎಂದು ಹೊರಟಿದ್ದಾನೆ.. ಸುಮಾರು ಎರಡು ಗಂಟೆಗಳ ನಂತರ ವಾಪಸ್ ಬಂದಿರುವ ವೈದ್ಯರು, ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.. ಕಳೆದ ವರ್ಷ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..
ಝಾನ್ಸಿ ಜಿಲ್ಲೆಯ ನವಾಬಾದ್ ಪ್ರದೇಶದ ಕಾಜಲ್ ಶರ್ಮಾ ಎಂಬ ಬಾಲಕಿ ಕಳೆದ ಡಿಸೆಂಬರ್‌ನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಕೆಳಗೆ ಬಿದ್ದಿದ್ದಳು.. ಇದರಿಂದ ಆಕೆಯ ಎಡಗೈಗೆ ಗಾಯವಾಗಿದ್ದು, ಮೊಣಕೈ ಮೂಳೆ ಮುರಿದಿತ್ತು.. ಕೂಡಲೇ ಪೋಷಕರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.. ಈ ವೇಳೆ ವೈದ್ಯ ಆಪರೇಷನ್ ಮಾಡಬೇಕೆಂದು ಹೇಳಿದ್ದು, ಆಪರೇಷನ್ ಅರ್ಧ ಮುಗಿದ ಮೇಲೆ ತಿಂಡಿ ತಿನ್ನಲು ಹೋಗಿದ್ದಾನೆ..
ಮಗುವನ್ನು ಪರೀಕ್ಷಿಸಿದ ಮೂಳೆ ಶಸ್ತ್ರಚಿಕಿತ್ಸಕ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸೂಚಿಸಿದ್ದಾರೆ. ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರಿಂದ ಡಿ.22ರಂದು ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥಿಯೇಟರ್ ಗೆ ಕರೆದೊಯ್ದರು.. ಆದರೆ, ಶಸ್ತ್ರ ಚಿಕಿತ್ಸೆ ಶುರು ಮಾಡಿದ ಸ್ವಲ್ಪ ಹೊತ್ತಿನಲ್ಲೇ ವೈದ್ಯರು ಹಸಿವಾಗಿದೆ, ಮಸಾಲೆ ದೋಸೆ ತಿಂದು ಬರುವುದಾಗಿ ಹೇಳಿ ಹೊರ ಬಂದಿದ್ದಾರೆ..
ಸುಮಾರು 2 ಗಂಟೆಗಳ ನಂತರ ಅವರು ಮತ್ತೆ ಬಂದು ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದರು.. ಆದರೆ, ಬಾಲಕಿಯ ಮನೆಯವರು ಮತ್ತೆ ಆಸ್ಪತ್ರೆಗೆ ಬಂದು ನೋಡಿದಾಗ ಗಾಯ ವಾಸಿಯಾಗದೇ ಕೈಬೆರಳುಗಳೂ ವಕ್ರವಾಗಿ ಬಿದ್ದಿರುವುದು ಕಂಡು ಬಂದಿದೆ.. ಆದರೆ ಅವರ ವೈದ್ಯರು ಅವರನ್ನು ಭೇಟಿ ಮಾಡಲು ನಿರಾಕರಿಸಿದರು.
ಇದರಿಂದ ಬಾಲಕಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.. ಹುಡುಗಿ ಹೇಳಿದಳು.. ನಾನು ಸರ್ಜರಿ ಮಾಡುವಾಗ ಎಲ್ಲವನ್ನೂ ನೋಡಿದೆ.. ನಾನು ಎಚ್ಚರವಾಗಿದ್ದೆ.. ನನ್ನ ತೋಳು ಮಾತ್ರ ನಿಶ್ಚೇಷ್ಟಿತವಾಗಿತ್ತು. ಆಪರೇಷನ್ ಹೇಗಿದೆ ಅಂತ ನೋಡ್ತಾ ಇದ್ದೆ.. ಮಧ್ಯದಲ್ಲಿ ಹಸಿವಾಗಿತ್ತು ಡಾಕ್ಟರ್ ಮಸಾಲಾ ದೋಸೆ ತಿಂದು ಬರುತ್ತೇನೆ ಎಂದು ಹೊರಗೆ ಹೋದರು… ಸುಮಾರು ಎರಡು ಗಂಟೆಯ ನಂತರ ಮತ್ತೆ ಬಂದು ಅವಸರದಲ್ಲಿ ಆಪರೇಷನ್ ಮುಗಿಸಿದರು. ಶಸ್ತ್ರಚಿಕಿತ್ಸೆಯ ನಂತರ ಕೈ ವಾಸಿಯಾಗುವುದು ಗ್ಯಾರಂಟಿ ಎಂದರು.. ಆದರೆ, ಕೈ ಬೆರಳುಗಳೂ ವಕ್ರವಾಗಿದ್ದವು. ಬೇರೆ ಆಸ್ಪತ್ರೆಗೆ ಹೋಗಿ ಆಪರೇಷನ್ ಮಾಡಿಸಿಕೊಂಡರೂ ಸಹ’ ಎಂದು ಕಾಜಲ್ ಶರ್ಮಾ ಹೇಳಿದ್ದಾರೆ.
ಈ ಸಂಬಂಧ ಸಂತ್ರಸ್ತೆಯ ಕುಟುಂಬದವರು ನವಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಎಸ್ಪಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶೀಘ್ರವೇ ಮುಖ್ಯಮಂತ್ರಿಗೆ ನೇರವಾಗಿ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆದರೆ, ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ವೈದ್ಯರೊಬ್ಬರು ಟೀ ನೀಡದೆ ಮಧ್ಯದಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡಿ ಬಿಟ್ಟಿದ್ದಾರೆ.