HealthNational

ಇಬ್ಬರು ದಕ್ಷಿಣ ಆಫ್ರಿಕಾ ಪ್ರಜೆಗಳಿಗೆ ಸೋಂಕು; ಬೆಂಗಳೂರಲ್ಲಿ ಕ್ವಾರಂಟೀನ್

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ದಕ್ಷಿಣ ಆಫ್ರಿಕಾ ಪ್ರಜೆಗಳಿಗೆ ಕೊರೋನಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ವಿದೇಶಗಳಿಂದ ಬಂದವರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಲಾಗುತ್ತಿದೆ. ಈ ವೇಳೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಇಬ್ಬರಿಗೆ ಕೊರೋನಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯನ್ನು ಇಬ್ಬರನ್ನು ಕ್ವಾರಂಟೀನ್‌ ಮಾಡಲಾಗಿದೆ.

ದಕ್ಷಿಣಾಫ್ರಿಕಾದಲ್ಲಿ ಒಮಿಕ್ರೋನ್‌ ಎಂಬ ಹೊಸ ರೀತಿಯ ಕೊರೋನಾ ತಳಿ ಪತ್ತೆಯಾಗಿದೆ. ಇದು ಇತರೆ ತಳಿಗಳಿಂತ ಹತ್ತು ಪಟ್ಟು ವೇಗವಾಗಿ ಹರಡುತ್ತದೆಂದು ಹೇಳಲಾಗುತ್ತಿದೆ. ಹೀಗಾಗಿ, ಎಲ್ಲೆಡೆ ಭೀತಿ ಉಂಟಾಗಿದೆ. ಇಂತಹ ಸಂದರ್ಭದಲ್ಲೇ ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಇಬ್ಬರನ್ನೂ ಕ್ವಾರಂಟೀನ್‌ ಮಾಡಲಾಗಿದೆ. ಇನ್ನು ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಅದೇ ವಿಮಾನದಲ್ಲಿ ಆಗಮಿಸಿದ್ದ ಇತರ ಪ್ರಯಾಣಿಕರನ್ನೂ ತೀವ್ರ ಪರೀಕ್ಷೆಗೊಳಪಡಿಸಲಾಗಿದೆ.

Share Post