BengaluruHealth

ಬೆಂಗಳೂರಿನಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚಳ; ವೈದ್ಯರ ಸಲಹೆಗಳೇನು..?

ಬೆಂಗಳೂರು; ಕಳೆದ ಎರಡು ದಿನಗಳಿಂದ ಮಳೆರಾಯ ಬೆಂಗಳೂರಿಗೆ ತಂಪೆರೆಯುತ್ತಿದ್ದಾನೆ.. ಆದ್ರೆ ಕಳೆದ ಕೆಲ ದಿನಗಳಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು.. ಇದರಿಂದಾಗಿ ಬಹುತೇಕರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಾಧಿಸುತ್ತಿದ್ದಾರೆ.. ಜ್ವರ, ಸುಸ್ತು ಜನರನ್ನು ಹೆಚ್ಚಾಗಿ ಬಾಧಿಸುತ್ತಿದೆ.. ಇದರ ನಡುವೆ ನಿರ್ಜಲೀಕರಣದಿಂದ ಕಿಡ್ನಿ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿದೆ.. ಕೆಲ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ.. ಅದ್ರಲ್ಲೂ ಕೂಡಾ ಮಹಿಳೆಯರಿಗಿಂತ ಹೊರಗಡೆ ಓಡಾಡುವ ಪುರುಷಲ್ಲಿ ಕಿಡ್ನಿ ಸಮಸ್ಯೆಗಳು ಮೂರು ಪಟ್ಟು ಹೆಚ್ಚಾಗಿವೆಯಂತೆ..!!!

ಬೇಸಿಗೆಯ ಧಗೆಯಿಂದಾಗಿ ದೇಹದಲ್ಲಿ ನಿರ್ಜಲೀಕರಣ ಹೆಚ್ಚಾಗುತ್ತಿದೆ.. ಇದರಿಂದಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ ಸಮಸ್ಯೆಗೆ ಕಾರಣವಾಗುತ್ತಿದೆ.. ಮೂತ್ರದಿಂದ ಫಿಲ್ಟರ್‌ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್‌ ರೂಪುಗೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಮನುಷ್ಯ ದಿನಕ್ಕೆ 3 ರಿಂದ 4 ಲೀಟರ್‌ ನೀರು ಕುಡಿಯಬೇಕು.. ಆದ್ರೆ ಬೇಸಿಗೆಯಲ್ಲಿ ಬೆವರಿನ ಮೂಲಕ ಹೆಚ್ಚು ನೀರು ಹೊರಹೋಗುತ್ತಿದ್ದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದೆ. ಇದರಿಂದ ಕಿಡ್ನಿ ಸ್ಟೋನ್‌ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ..

 

Share Post