Health

ದೇಹದ ತೂಕ ಇಳಿಕೆಗೆ ಚಿಂತಿಸುತ್ತೀದ್ದಿರಾ?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಿಂದ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಜೊತೆಗೆ ದೇಹದ ತೂಕ ಹೆಚ್ಚಾಗುತ್ತಿದೆ.
ಹೆಚ್ಚುವರಿ ತೂಕದಿಂದ ಫಿಟ್ ಆಗಿಲ್ಲ ಎಂಬುವುದು ಕೆಲವರಿಗೆ ಚಿಂತೆಯಾದರೆ, ಇನ್ನು ಕೆಲವರಿಗೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲಾ ಎಂಬ ಚಿಂತೆ. ಹೀಗಿರುವಾಗ ಒಂದಲ್ಲಾ ಒಂದು ರೀತಿಯಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಹೇಳುತ್ತಾರೆ.
ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮಗಳು
ನಿಮ್ಮ ತೊಡೆಯ ಊತವನ್ನು ನೀವು ಕಡಿಮೆ ಮಾಡಲು ವ್ಯಾಯಾಮದ ಮೊರೆ ಹೋಗಿ. ದಪ್ಪವಾದ ತೊಡೆಯಿರುವ ಪುರುಷರು ಮತ್ತು ಮಹಿಳೆಯರು, ಮೊದಲು ನಿಮಗೆ ಸೀಮಿತವಾಗಿರುವ ಸಮಯದಲ್ಲಿ ಯಾವ ವ್ಯಾಯಾಮ ಮಾಡಬಹುದು.
ಸೀಸರ್ ಲೆಗ್ಸ್ ಪ್ಲ್ಯಾಂಕ್
ಈ ವ್ಯಾಯಾಮವನ್ನು ಮಾಡಲು ಮೊದಲು ನೀವು ನಿಮ್ಮ ಪಾದಗಳನ್ನು ನೇರವಾಗಿಸಿ. ಬಳಿಕ ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಕಾಲುಗಳನ್ನು ಅಗಲವಾಗಿಸಿ. ನಂತರ ಮುಂದಕ್ಕೆ ನೋಡುತ್ತ ಒಂದು ಕಾಲನ್ನು ಎತ್ತಿ. ಹೀಗೆ ನಿರಂತರವಾಗಿ ದಿನಕ್ಕೆ 5 ನಿಮಿಷ ಮಾಡುವುದರಿಂದ ತೊಡೆ ಭಾಗದ ತೂಕ ಕಡಿಮೆಯಾಗುತ್ತದೆ.
ಲಂಗ್ಸ್
ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ಇದು ಒಂದು ಶ್ರೇಷ್ಠ ಹಂತವಾಗಿದೆ. ಕಾಲನ್ನು ಅಗಲವಾಗಿಸಿ. ನಂತರ ಸೊಂಟದ ಮೇಲೆ ಕೈಗಳನ್ನು ಇರಿಸಿ. ಹೆಜ್ಜೆಯನ್ನು ಮುಂದಕ್ಕೆ ಚಾಚಿ. ಹೀಗೆ ನಿರಂತರವಾಗಿ ಮಾಡುವುದರಿಂದ ತೂಕ ಆದಷ್ಟು ಬೇಗ ಕಡಿಮೆಯಾಗುತ್ತದೆ.

Share Post