ಪೇಂಟ್ ಮಿಕ್ಸರ್‌ಗೆ ಜಡೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಮಹಿಳೆ!
ಬೆಂಗಳೂರು; ಪೇಂಟ್ ಬೆರೆಸುವ ಮಿಕ್ಸರ್‌ಗೆ ಮಹಿಳೆಯ ಕೂದಲು ಸಿಲುಕಿದ್ದು, ಇದರಿಂದಾಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ನಡೆದಿದೆ. ಪೇಂಟ್ ಗ್ರೈಂಡರ್‌ನಲ್ಲಿ ಮಹಿಳೆಯ ಕೂದಲು ಸಿಲುಕಿದ್ದರಿಂದ ಅದು ತಲೆಯನ್ನು ಕೂಡಾ ಎಳೆದಿದ್ದು, ಮಹಿಳೆಯ ತಲೆ ಕಟ್ ಆಗಿ ಬಿದ್ದಿದೆ.
ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ 33 ವರ್ಷದ ಶ್ವೇತಾ ಮೃತ ಮಹಿಳೆಯಾಗಿದ್ದಾರೆ. ಈಕೆ ಕೆಲ ವರ್ಷಗಳಿಂದ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಬಣ್ಣ ಗ್ರೈಂಡ್ ಮಾಡಲಾಗುತ್ತಿತ್ತು. ಈ ವೇಳೆ ಬಣ್ಣ ಗಟ್ಟಿಯಾಗಿದ್ದರಿಂದ ಅದನ್ನು ಚೆಕ್ ಮಾಡಲು ಗ್ರೈಂಡರ್ ಒಳಗೆ ಬಗ್ಗಿ ನೋಡಿದ್ದಾರೆ. ಈ ವೇಳೆ ಜಡೆ ಗ್ರೈಂಡರ್‌ಗೆ ಸಿಲುಕಿದೆ.
ಜಡೆ ಸಿಲುಕಿದಾಗ ಶ್ವೇತಾ ಅವರು ಕೂಗಿಕೊಂಡರೂ ಗ್ರೈಂಡರ್ ಸೌಂಡ್ ಗೆ ಯಾರಿಗೂ ಕೇಳಿಸಿಲ್ಲ. ಮಹಿಳೆ ಗ್ರೈಂಡರ್‌ಗೆ ಸಿಲುಕಿ ಮೃತಪಟ್ಟ ಬಳಿಕ ಉಳಿದ ಕೆಲಸಗಾರರು ಬಂದು ನೋಡಿದ್ದಾರೆ. ಗ್ರೈಂಡರ್ ತಿರುಗುತ್ತಿದ್ದ ಸ್ಪೀಡ್ಗೆ ಶ್ವೇತಾ ತಲೆಯೇ ಕತ್ತರಿಸಿದೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.