HealthLifestyle

ದಿನಾ ಮೊಸರು ಸೇವಿಸಿದರೆ ಶ್ವಾಸಕೋಶ ಕ್ಯಾನ್ಸರ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು!

ಕ್ಯಾನ್ಸರ್‌ ಅಂದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ.. ಕ್ಯಾನ್ಸರ್‌ ಬಂದರೆ ಇನ್ನು ಸಾವೇ ಗತಿ ಎಂದು ಎಲ್ಲರೂ ನಂಬಿದ್ದಾರೆ.. ಕ್ಯಾನ್ಸರ್‌ ಬಂದವರು ಅದರಿಂದ ದೂರವಾಗಿ ಬದುಕಿ ಬಂದ ಉದಾಹರಣೆಗಳು ಸಾಕಷ್ಟಿದ್ದರೂ, ಕ್ಯಾನ್ಸರ್‌ ನಮ್ಮ ನಿದ್ದೆಗೆಡಿಸುತ್ತಲೇ ಇದೆ.. ಆದ್ರೆ  ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೇ ಬದಲಾವಣೆ ತಂದರೂ, ಎಷ್ಟೇ ಮುಂದುವರಿದ ತಂತ್ರಜ್ಞಾನ ಬಂದರೂ ಕ್ಯಾನ್ಸರ್ ಮಹಾಮಾರಿಯನ್ನು ಸಂಪೂರ್ಣವಾಗಿ ಜಯಿಸಲು ಸಾಧ್ಯವಾಗುತ್ತಿಲ್ಲ.. ಆಹಾರ ಸೇವನೆ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ..

ಕ್ಯಾನ್ಸರ್‌ ಪ್ರಕರಣಗಳಲ್ಲಿ ಹೆಚ್ಚಿನವು ಶ್ವಾಸಕೋಶ ಕ್ಯಾನ್ಸರ್‌ ಆಗಿವೆ.. ಧೂಮಪಾನ ಮಾಡುವವರಲ್ಲಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚು.. ಆದರೆ, ಈಗ ಮಾಲಿನ್ಯದಿಂದ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.. ಪರೋಕ್ಷವಾಗಿ ಧೂಮಪಾನ ಮಾಡಿದರಲ್ಲಿ ಕೂಡಾ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ… ಏತನ್ಮಧ್ಯೆ, ಶ್ವಾಸಕೋಶದ ಕ್ಯಾನ್ಸರ್ ಪೀಡಿತರಲ್ಲಿ ಸುಮಾರು 20% ಧೂಮಪಾನಿಗಳಲ್ಲ. ಆದರೂ ಕ್ಯಾನ್ಸರ್‌ ಬರುತ್ತಿದೆ..

ಆದರೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಈ ಕ್ಯಾನ್ಸರ್ ನಮ್ಮನ್ನು ವಕ್ಕರಿಸದಂತೆ ತಡೆಯಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ವಿಶೇಷವಾಗಿ ಉಸಿರಾಟದ ವ್ಯಾಯಾಮ ಮಾಡಿದರೆ ಶ್ವಾಸಕೋಶದ ಆರೋಗ್ಯ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.. ಆದರೆ ಸೇವಿಸುವ ಆಹಾರ ಶ್ವಾಸಕೋಶದ ಆರೋಗ್ಯವನ್ನೂ ಕಾಪಾಡುತ್ತದೆ ಎನ್ನುತ್ತಾರೆ ತಜ್ಞರು. ಅದರಲ್ಲೂ ಮೊಸರು ಆಹಾರದ ಭಾಗವಾಗಿದ್ದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಇದು ತಮಾಷೆಯಾಗಿ ಹೇಳುತ್ತಿರುವ ವಿಷಯವಲ್ಲ. ಸಂಶೋಧನೆ ನಡೆಸಲಾಗಿದ್ದು, ಇದು ಬಹಿರಂಗವಾಗಿದೆ. ದಿನಕ್ಕೆ ಸುಮಾರು 85 ಗ್ರಾಂ ಮೊಸರು ಸೇವಿಸುವ ಪುರುಷರು ಮತ್ತು 113 ಗ್ರಾಂ ಮೊಸರು ಸೇವಿಸುವ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯವು 19% ಕಡಿಮೆಯಾಗಿದೆ ಎಂದು ಸಂಶೋಧನೆಯಿಂದ ಬಹಿರಂಗಪಡಿಸಿದೆ. ಮೊಸರಿನೊಂದಿಗೆ ಹೆಚ್ಚಿನ ಫೈಬರ್ ಅಂಶವಿರುವ ಆಹಾರವನ್ನು ಸೇವಿಸಿದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ 17% ಕಡಿಮೆ ಎಂದು ಕಂಡುಬಂದಿದೆ.

ಇದಕ್ಕಾಗಿ ಸಂಶೋಧಕರು ಒಟ್ಟು 14 ಲಕ್ಷ ಜನರನ್ನು ಪರಿಗಣಿಸಿ ಅವರ ಮೇಲೆ ಸಂಶೋಧನೆ ನಡೆಸಿದರು. ಭವಿಷ್ಯದಲ್ಲಿ ಶ್ವಾಸಕೋಶದ ಕ್ಯಾನ್ಸರ್ ತಪ್ಪಿಸಲು ಆಹಾರದಲ್ಲಿ ಮೊಸರು ಮತ್ತು ಫೈಬರ್ ಅಂಶವು ಸರಿಯಾಗಿರಬೇಕು ಎಂದು ಹೇಳಲಾಗುತ್ತದೆ.

Share Post