CrimeNational

ನವ ವಿವಾಹಿತೆಗೆ ಹಿಗ್ಗಾಮುಗ್ಗಾ ಥಳಿತ; ಘಟನೆ ನಂತರ ಗಂಡ ವಿದೇಶಕ್ಕೆ ಎಸ್ಕೇಪ್‌!

ಕೋಯಿಕ್ಕೋಡ್‌; ಹೊಸದಾಗಿ ವಿವಾಹವಾಗಿದ್ದ ಮಹಿಳೆಯನ್ನು ಗಂಡನೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.. ಕೇರಳದ ಕೋಯಿಕ್ಕೋಡ್‌ ಜಿಲ್ಲೆಯ ಪಂತಿರನಕಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ.. ಹೀಗಾಗಿ ಆತನಿಗಾಗಿ ಕೇರಳ ಪೊಲೀಸರು ಇಂಟರ್‌ ಪೋಲ್‌ನಿಂದ ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಿದ್ದಾರೆ..

ಆರೋಪಿ ರಾಹುಲ್‌ ಪಿ.ಗೋಪಾಲ್‌ ಜರ್ಮನಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ..  ಗಾಯಾಳು ಮಹಿಳೆ ಹಾಗೂ ರಾಹುಲ್‌ ಪಿ ಗೋಪಾಲ್‌ ಅವರು  ಮೇ 5 ರಂದು ವಿವಾಹವಾಗಿದ್ದರು.. ಆದ್ರೆ ಅದೇನಾಯ್ತೋ ಏನೋ ಕೆಲವೇ ದಿನಗಳಲ್ಲಿ ಪತ್ನಿ ಜೊತೆ ಆರೋಪಿ ಜಗಳ ತೆಗೆದಿದ್ದಾನೆ.. ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.. ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಇತ್ತ ಆರೋಪಿ ಜರ್ಮನಿಗೆ ಎಸ್ಕೇಪ್‌ ಆಗಿದ್ದಾನೆ..

ಇದೀಗ ಕೇರಳ ಮಹಿಳಾ ಆಯೋಗ ಪೊಲೀಸರಿಂದ ವರದಿ ಕೇಳಿದ್ದು, ಕೇರಳ ರಾಜ್ಯಾದ್ಯಂತ ಈ ಪ್ರಕರಣ ಸದ್ದು ಮಾಡುತ್ತಿದೆ..

Share Post