Health

ಮಜ್ಜಿಗೆಯಲ್ಲಿದೆ ಹಲವು ಪ್ರಯೋಜನೆಗಳು

ಬೇಸಿಗೆ ಸಮಯದಲ್ಲಿ ಏವಾದ್ರು ತಂಪು ಪಾನೀಯಾ ಕುಡಿಬೇಕು ಅನಿಸುತ್ತದೆ. ಆಗಾ ಕೂಲ್‌ ಡ್ರಿಂಕ್ಸ್‌ ಕಡೆ ಮುಖಮಾಡುತ್ತಾರೆ ಜನರು. ಅದು ಕುಡಿಯಲು ಎಷ್ಟು ರುಚಿ ಇರುತ್ತದೆಯೋ ಅಷ್ಟೇ ಆರೋಗ್ಯ ಕೂಡ ಹಾಳಾಗುತ್ತದೆ. ಇದ್ದರಿಂದು ದಣಿವು ನೀಗಿಸಲು ಬೇಸಿಗೆ ಸಮಯದಲ್ಲಿ ಎಳೇನೀರು ಬಿಟ್ಟರೆ ಮಜ್ಜಿಗೆ. ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಸುಲಭವಾಗಿ ವಿವಿಧ ರೀತಿಯಲ್ಲಿ ಮಜ್ಜಿಗೆ ತಯಾರು ಮಾಡಿಕೊಳ್ಳಬಹುದು.
ಮೊಸರಿಗೆ ಕೊಂಚ ನೀರು ಸೇರಿಸಿ ತೆಳ್ಳಗಾಗಿಸಿ, ಇದಕ್ಕೆ ಹಸಿಮೆಣಸು, ಉಪ್ಪು, ಜೀರಿಗೆ ಪುಡಿ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಬೇರೆ ಯಾವುದು ಅಲ್ಲ. ಇದರ ಪ್ರಯೋಜನಗಳೇನು ತಿಳಿಯೋಣ.
ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು
ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ.
ದೇಹದ ತಾಪಮಾನವನ್ನು ತಣಿಸುತ್ತದೆ
ಬೇಸಿಗೆಯ ಬಿಸಿಯಲ್ಲಿ ದೇಹವೂ ಬಿಸಿಯಾಗತೊಡಗುತ್ತದೆ. ಇದನ್ನು ತಣಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿಯಬೇಕಾಗುತ್ತದೆ. ಆಗ ದೇಹದಿಂದ ನಷ್ಟವಾಗುವ ನೀರನ್ನು ಬೇಗನೇ ಭರ್ತಿಮಾಡಿಕೊಳ್ಳದೇ ಇದ್ದರೆ ದ್ರವದ ಪ್ರಮಾಣ ಕಡಿಮೆಯಾಗಿ ದೇಹ ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ.
ಹೊಟ್ಟೆ ಉಬ್ಬರಿಕೆ ಮೊದಲಾದ ಸಮಸ್ಯೆಗೆ ರಾಮಬಾಣ
ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಮಸಾಲೆ ಹೊಟ್ಟೆ ಸೇರುವುದರಿಂದ ಇವು ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಹಾಲಿನಲ್ಲಿರುವ ಪ್ರೋಟೀನುಗಳು ಮಜ್ಜಿಗೆಯಲ್ಲಿಯೂ ಇದ್ದು ಈ ಉರಿ ತರಿಸುವ ಮಸಾಲೆಗಳನ್ನು ತಟಸ್ಥವಾಗಿಸುತ್ತವೆ.

Share Post