Politics

ಬಿಜೆಪಿ ನೇತೃತ್ವದ ಎನ್‌ಡಿಎಗೆ 220 ಸೀಟು ಅಷ್ಟೇನಾ ಬರೋದು..?

ಬೆಂಗಳೂರು; ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನ ಬರುತ್ತೆ, ಮೋದಿ ಮೂರನೇ ಬಾರಿ ಪ್ರಧಾನಿಯಾಗ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.. ಆದ್ರೆ, ವಾಸ್ತವವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 220 ಸೀಟಿಗಿಂತ ಹೆಚ್ಚಿಗೆ ಬರೋದಿಲ್ಲವಂತೆ.. ಇದನ್ನು ಹೇಳ್ತಿರೋದು ಯಾವುದೋ ಸಮೀಕ್ಷೆಯಲ್ಲ.. ಬದಲಾಗಿ ಇದನ್ನು ಹೇಳ್ತಿರೋದು ಸಿಎಂ ಸಿದ್ದರಾಮಯ್ಯ..

ಇದನ್ನೂ ಓದಿ; ಈ ಏಳು ಲಕ್ಷಣಗಳಿದ್ದರೆ ನಿಮ್ಮ ಕಣ್ಣುಗಳು ಹಾಳಾಗುತ್ತಿವೆ ಎಂದರ್ಥ..!

ಎನ್‌ಡಿಎಗೆ 220 ಸೀಟಿಗಿಂತ ಜಾಸ್ತಿ ಬರೋದಿಲ್ಲ;

ಲೋಕಸಭಾ ಚುನಾವಣೆಯ ಪ್ರಚಾರದ ಬ್ಯುಸಿ ನಡುವೆ ಪ್ರಚಾರದ ಭಾಗವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂವಾದ ನಡೆಸಿದ್ದಾರೆ.. ಈ ಸಂವಾದದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಎನ್‌ಡಿಎಗೆ 220 ಸ್ಥಾನಗಳಿಗಿಂತ ಹೆಚ್ಚು ಬರೋದಿಲ್ಲ. ಇದು ಬಿಜೆಪಿಯವರಿಗೂ ಅರ್ಥವಾಗಿದೆ.. ಹೀಗಾಗಿ ಸುಮ್ಮನೆ 400 ಸೀಟು ಬರುತ್ತೆ ಎಂದು ಪ್ರಚಾರ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ; ದರ್ಶನ್ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶ; ಪವಾಡವೆಂಬಂತೆ ಪಾರು!

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸೀಟು ಬರೋದಿಲ್ಲ;

ಕರ್ನಾಟಕ, ತೆಲಂಗಾಣ, ತಮಿಳುನಾಡುಗಳಲ್ಲಿ ಬಿಜೆಪಿ ಬರೋದೇ ಇಲ್ಲ ಎಂದಿರುವ ಸಿದ್ದರಾಮಯ್ಯ, ಕೇರಳದಲ್ಲಿ ಎಲ್ಲಾ ಸೀಟುಗಳೂ ಇಂಡಿಯಾ ಒಕ್ಕೂಟವೇ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.. ಇನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಅವರು ಕೂಡಾ ನಾನು ಕೇರಳಕ್ಕೆ ಪ್ರಚಾರಕ್ಕೆ ಹೋಗಿದ್ದೆ. ಎಲ್ಲಾ ಕಡೆ ನಾವೇ ಗೆಲ್ಲೋದು ಎಂದು ಹೇಳಿದ್ದಾರೆ..

ಇದನ್ನೂ ಓದಿ; ದೇಶ ಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದಂತೆ ಆಡುತ್ತಿದ್ದಾರೆ; ಶಾಸಕ ಲಕ್ಷ್ಮಣ್ ಸವದಿ

ರಾಜ್ಯದಲ್ಲಿ 20ಕ್ಕೂ ಹೆಚ್ಚು ಸೀಟು ಬರುತ್ತಾ..?;

ಇನ್ನು ರಾಜ್ಯದಲ್ಲಿ 28ಕ್ಕೆ 28 ಸೀಟೂ ಕೂಡಾ ಬಿಜೆಪಿ ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳುತ್ತಿದ್ದಾರೆ.. ಆದ್ರೆ ಸಿದ್ದರಾಮಯ್ಯ ಅವರು ಹೇಳೋದೇ ಬೇರೆ.. ರಾಜ್ಯದಲ್ಲಿ ಕಾಂಗ್ರೆಸ್‌ಗೆ 20ಕ್ಕೂ ಹೆಚ್ಚು ಸ್ಥಾನ ಸುಲಭವಾಗಿ ಗೆಲ್ಲಲಿದೆ.. ನಾವು ಕೊಟ್ಟಿರುವ ಗ್ಯಾರೆಂಟಿಗಳ ಜೊತೆ ಲೋಕಸಭಾ ಚುನಾವಣೆಗೆ ಹಲವು ಗ್ಯಾರೆಂಟಿಗಳನ್ನು ಪ್ರಕಟಿಸಲಾಗಿದೆ.. ಇದಕ್ಕೆ ಮಹಿಳೆಯರು ಮತ ಕೊಡುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ; ಕೆನಡಾದ ಅತಿದೊಡ್ಡ ದರೋಡೆ; ಇಬ್ಬರು ಭಾರತೀಯರ ಅರೆಸ್ಟ್

ಜೆಡಿಎಸ್‌ ಒಂದೂ ಸೀಟು ಗೆಲ್ಲೋದಿಲ್ಲವಾ..?;

ಇನ್ನು ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡುತ್ತಾ, ಜೆಡಿಎಸ್‌ನವರು ಅದು ಯಾಕೆ ಬಿಜೆಪಿ ಜೊತೆಗೆ ಹೋದರೋ ಗೊತ್ತಿಲ್ಲ.. ಅವರು ಹಾಸನ, ಮಂಡ್ಯ ಹಾಗೂ ಕೋಲಾರ ಮೂರಲ್ಲೂ ಸೋಲುತ್ತಾರೆ.. ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್‌ ಅವರೂ ಸೋಲುತ್ತಾರೆ ಎಂಬ ವಿಶ್ವಾಸವನ್ನು ಡಿ.ಕೆ.ಶಿವಕುಮಾರ್‌ ವ್ಯಕ್ತಪಡಿಸುತ್ತಿದ್ದಾರೆ..

 

 

Share Post